ವಿಜಯಸಾಕ್ಷಿ ಸುದ್ದಿ, ಮುಳಗುಂದ: ಚಿತ್ರಕಲೆಯು ಎಲ್ಲಾ ಕಾಲದಲ್ಲೂ ಸಲ್ಲುವ ಕಲೆಯಾಗಿದ್ದು, ಮಕ್ಕಳ ಕಲಿಕೆಗೆ ಪೂರಕವಾಗಿದೆ ಎಂದು ಶಾಲಾ ಪ್ರಧಾನ ಗುರು ಎಸ್.ಎಚ್. ಪೂಜಾರ ಹೇಳಿದರು.
ಅವರು ಪಟ್ಟಣದ ಸರಕಾರಿ ಪ್ರೌಢಶಾಲೆ (ಆರ್‌ಎಂಎಸ್‌ಎ)ಯಲ್ಲಿ ಚಿತ್ರಕಲಾ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿ, ಚಿತ್ರಕಲೆ ಒಂದೇ ಚಿತ್ರದಲ್ಲಿ ಸಾಕಷ್ಟು ವಿಷಯಗಳನ್ನು ತಿಳಿಯುವಂತೆ ತೋರಿಸಿಕೊಡುವ ಅದ್ಭುತ ಕಲೆಯಾಗಿದ್ದು, ಮಕ್ಕಳು ಪ್ರೌಢ ಹಂತದಲ್ಲಿ ಹೆಚ್ಚು ಹೆಚ್ಚು ಚಿತ್ರಗಳನ್ನು ಬಿಡಿಸುವತ್ತ ಆಸಕ್ತಿ ವಹಿಸಬೇಕು ಎಂದರು.
ನೂರಹ್ಮದ ನದಾಫ್, ಎಲ್.ಡಿ. ರಾಠೋಡ, ವಿ.ಟಿ. ಅಂಗಡಿ. ಬಸವರಾಜ ಗೌರಿಮನಿ, ಜಿ.ಆರ್. ಕುಂದರಗಿ, ಎಸ್.ವಿ. ತಿಮ್ಮಾಪೂರ, ಗೀತಾ ಪಾಟೀಲ್, ಎಸ್‌ಡಿಎಂಸಿ ಅಧ್ಯಕ್ಷ ಮಾಹಾದೇವಪ್ಪಾ ಮಾನೇಗಾರ, ಮಾಹಾಂತೇಶ ಕೆಂಚನಾಯ್ಕರ್, ಗುಳಪ್ಪ ಮಜ್ಜಿಗುಡ್ಡ ಇದ್ದರು.



