ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಾರ್ಬಿನ್ ಬಾಷ್ ಅವರನ್ನು ಒಂದು ವರ್ಷ ನಿಷೇಧ ಹೇರಲಾಗಿದೆ. ಐಪಿಎಲ್‌ನ ಭಾಗವಾಗಿರುವ ಮುಂಬೈ ಇಂಡಿಯನ್ಸ್ನ ಪ್ಲೇಯರ್ ಕಾರ್ಬಿನ್ ಲಿಜರ್ಡ್ ವಿಲಿಯಮ್ಸ್ ಗಾಯಕ್ಕೆ ತುತ್ತಾದ ಕಾರಣ ಬದಲಿ ಆಟಗಾರನಾಗಿ ಕಾರ್ಬಿನ್ ಬಾಷ್ ಅವರನ್ನು ಆಯ್ಕೆ ಮಾಡಿತು.
ಇದರ ಬೆನ್ನಲ್ಲೇ ಕಾರ್ಬಿನ್ ಬಾಷ್ ಪಿಎಸ್ಎಲ್ ಬದಲಿಗೆ ಐಪಿಎಲ್‌ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದರು. ಅದಕ್ಕಾಗಿ ಪಿಎಸ್ಎಲ್ನಿಂದ ಹಿಂದೆ ಸರಿದರು. ಇದರ ಬೆನ್ನಲ್ಲೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಕಾರ್ಬಿನ್‌ಗೆ ನೋಟಿಸ್ ಕಳಿಹಿಸಿದ್ದರು.
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕಳುಹಿಸಿದ ಕಾನೂನು ನೋಟೀಸ್‌ಗೆ ಕಾರ್ಬಿನ್ ನೀಡಿದ ಉತ್ತರ ಸರಿಯಾಗಿದೆ. ಆದರೆ ಪಿಎಸ್‌ಎಲ್ ನಿಯಮಗಳನ್ನು ಪಾಲಿಸದ ಕಾರಣ ಪಿಸಿಬಿ ಅವರನ್ನು ಅಮಾನತುಗೊಳಿಸಿತು. ಒಂದು ಪಾಕಿಸ್ತಾನ ಆಯೋಜಿತ್ ಲೀಗ್ಗಳನ್ನು ಆಡದಂತೆ ನಿಷೇಧ ಹೇರಿದೆ.
ಅದರಂತೆ ಪಾಕಿಸ್ತಾನ್ ಸೂಪರ್ ಲೀಗ್ 2026 ರಲ್ಲಿ ಕಾರ್ಬಿನ್ ಬಾಷ್ಗೆ ಅವಕಾಶ ದೊರೆಯುವುದಿಲ್ಲ. ಇತ್ತ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿರುವ ಕಾರ್ಬಿನ್ ಬಾಷ್, ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಒಡೆತನದ ಎಂಐ ಕೇಪ್ಟೌನ್ ಪರ ಕಣಕ್ಕಿಳಿಯುತ್ತಿದ್ದಾರೆ.