ಇಸ್ಲಾಮಾಬಾದ್: ಏಪ್ರಿಲ್ 22ರಂದು ಪಹಲ್ಗಾಮ್ನಲ್ಲಿ ಉಗ್ರರು ದಾಳಿ ಮಾಡಿದ್ದು, ಇದರಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದ್ದರು. ಇದಾದ ಬಳಿಕ ಭಾರತೀಯ ಸೇನೆ ಮೇ 7ರಂದು ಆಪರೇಶನ್ ಸಿಂಧೂರ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದಲ್ಲಿದ್ದ ಉಗ್ರರ ನೆಲೆಗಳನ್ನು ಧ್ವಂಸಗೊಳಿಸುವಲ್ಲಿ ಯಶಸ್ವಿಯಾಗಿತ್ತು. ಬಳಿಕ ಪಾಕ್ ಹಾಗೂ ಭಾರತ ನಡುವಿನ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಇದರ ಮಧ್ಯೆ ಇದೀಗ ಉಗ್ರ ಮಸೂದ್ ಅಜರ್ಗೆ ಪಾಕಿಸ್ತಾನ ಸರ್ಕಾರವು 14 ಕೋಟಿ ರೂ. ಪರಿಹಾರ ನೀಡಲಿದೆ ಎಂದು ಹೇಳಲಾಗುತ್ತಿದೆ.
ಹೌದು ಉಗ್ರರನ್ನು ಮಟ್ಟ ಹಾಕಲು ಭಾರತವು ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಪಾಕಿಸ್ತಾನದ ಮೇಲೆ ನಡೆಸಿದ್ದ ದಾಳಿಯಲ್ಲಿ ಉಗ್ರ ಮಸೂದ್ ಅಜರ್ ಕುಟುಂಬದಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ, ಹಾಗೆಯೇ ಆತನ ನಾಲ್ವರು ಆಪ್ತರು ಕೂಡ ಸಾವನ್ನಪ್ಪಿದ್ದಾರೆ.
ಪಾಕಿಸ್ತಾನ ಸರ್ಕಾರವು ಭಾರತೀಯ ದಾಳಿಯಲ್ಲಿ ಮೃತರಾದ ಕುಟುಂಬಕ್ಕೆ ತಲಾ 1 ಕೋಟಿ ರೂ. ಪರಿಹಾರ ನೀಡುವುದಾಗಿ ಘೋಷಿಸಿದೆ. ಈ ಯೋಜನೆಯ ಅತಿದೊಡ್ಡ ಫಲಾನುಭವಿ ಮಸೂದ್ ಅಜರ್ ಆಗಿದ್ದಾರೆ. ಭಾರತವು ಮಸೂದ್ ನ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ನ ಬಹಾವಲ್ಪುರ್ ಪ್ರಧಾನ ಕಚೇರಿಯ ಮೇಲೆ ಭಾರತ ವಾಯುದಾಳಿ ನಡೆಸಿತ್ತು.
ಈ ರೀತಿಯಾಗಿ, ಪಾಕಿಸ್ತಾನ ಸರ್ಕಾರವು ಸಹಾಯದ ಹೆಸರಿನಲ್ಲಿ ಬಿಡುಗಡೆ ಮಾಡುವ ಹಣವು ಭಯೋತ್ಪಾದಕರು ಮತ್ತು ಅವರ ಕುಟುಂಬಗಳಿಗೆ ನೇರವಾಗಿ ಸಹಾಯ ಮಾಡುತ್ತದೆ. ಪಾಕಿಸ್ತಾನದ ಪ್ರಧಾನಿ ಕಚೇರಿ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ, 1 ಕೋಟಿ ರೂಪಾಯಿಗಳ ಸಹಾಯವನ್ನು ಘೋಷಿಸಲಾಗಿದೆ. ಸಹಾಯದ ಹೆಸರಿನಲ್ಲಿ ಬಿಡುಗಡೆಯಾದ ಈ ಮೊತ್ತದ ನೇರ ಲಾಭವನ್ನು ಈಗ ಮಸೂದ್ ಅಜರ್ ಮಾತ್ರ ಪಡೆಯುತ್ತಾನೆ.
ಆಪರೇಷನ್ ಸಿಂಧೂರ್ ಅಡಿಯಲ್ಲಿ , ಭಾರತವು ಮುರಿಡ್ಕೆಯಲ್ಲಿರುವ ಹಫೀಜ್ ಸಯೀದ್ ಅಡಗುತಾಣಗಳ ಮೇಲೆ ಮತ್ತು ನಂತರ ಬಹಾವಲ್ಪುರದಲ್ಲಿರುವ ಜೈಶ್ ಅಡಗುತಾಣಗಳ ಮೇಲೆ ಬೃಹತ್ ದಾಳಿಗಳನ್ನು ನಡೆಸಿತ್ತು. ಲಾಹೋರ್‌ನಿಂದ ಸುಮಾರು 400 ಕಿಲೋಮೀಟರ್ ದೂರದಲ್ಲಿರುವ ಬಹಾವಲ್ಪುರದ ಮೇಲೆ ಭಾರತ ನಡೆಸಿದ ಈ ಭೀಕರ ದಾಳಿಯು ಭಯೋತ್ಪಾದಕ ಯಜಮಾನರನ್ನು ಸಹ ಬೆಚ್ಚಿಬೀಳಿಸಿತು.