HomeKarnataka Newsಕದನ ವಿರಾಮ ನಂತರವೂ ಪಾಕಿಸ್ತಾನ ತನ್ನ ನರಿ ಬುದ್ಧಿ ತೋರಿಸಿದೆ: ಸಂಸದೆ ಶೋಭಾ ಕರಂದ್ಲಾಜೆ

ಕದನ ವಿರಾಮ ನಂತರವೂ ಪಾಕಿಸ್ತಾನ ತನ್ನ ನರಿ ಬುದ್ಧಿ ತೋರಿಸಿದೆ: ಸಂಸದೆ ಶೋಭಾ ಕರಂದ್ಲಾಜೆ

For Dai;y Updates Join Our whatsapp Group

Spread the love

ಬೆಂಗಳೂರು: ಕದನ ವಿರಾಮ ನಂತರವೂ ಪಾಕಿಸ್ತಾನ ತನ್ನ ನರಿ ಬುದ್ಧಿ ತೋರಿಸಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಮ್ಮ ದಾಳಿಗೆ ಹೆದರಿ ಪಾಕಿಸ್ತಾನ ಅಮೆರಿಕ ಮತ್ತು ಬೇರೆ ಬೇರೆ ದೇಶಗಳ ಕಾಲು ‌ಹಿಡಿದುಕೊಳ್ತು. ಈ ಯುದ್ಧ ನಿಲ್ಲಿಸಬೇಕು, ಯುದ್ಧ ಮುಂದುವರೆಸುವ ಶಕ್ತಿ‌ನಮಗಿಲ್ಲ ಅಂತ ಪಾಕಿಸ್ತಾನ ಕೇಳಿಕೊಳ್ತು ಎಂದ ಅವರು,

ಅಮೆರಿಕ ಮಧ್ಯಸ್ಥಿಕೆ ಮೂಲಕ ಕದನ ವಿರಾಮ ನಂತರವೂ ಪಾಕಿಸ್ತಾನ ತನ್ನ ನರಿ ಬುದ್ಧಿ ತೋರಿಸಿದೆ. ನಾವು ದೇಶಕ್ಕಾಗಿ ನಡಿಗೆ ಮಾಡಿದ್ದೇವೆ, ನಮ್ಮ ಸೈನಿಕರ ಪರ ಇಡೀ ದೇಶ ನಿಂತಿದೆ. ತಿನ್ನೋಕೆ, ಕುಡಿಯೋಕೆ ಇಲ್ಲದ ದೇಶ ಪಾಕಿಸ್ತಾನ ನಿರಂತರ ತೊಂದರೆ ಕೊಡ್ತಿದೆ, ಇದು ನಿಲ್ಲಬೇಕು ಎಂದು ಹೇಳಿದರು.

ಇನ್ನೂ ಪಾಕಿಸ್ತಾನದ ನಡೆಯನ್ನು ವಿಶ್ವ ನೋಡಿದೆ, ಈಗ ವಿಶ್ವವೇ ಯೋಚಿಸಬೇಕು ಎಂದು ಹೇಳಿದ ಬಿಜೆಪಿ ನಾಯಕಿ, ಶೋಭಾ ಕರಂದ್ಲಾಜೆ, ನಾವು ಸೂಚನೆ ಪಾಲಿಸಿದ್ದೇವೆ, ಪಾಕಿಸ್ತಾನ ಪಾಲಿಸಿಲ್ಲ. ನಾವು ಪಾಕಿಸ್ತಾನದಲ್ಲಿ ಉಗ್ರ ನೆಲೆಗಳ ಮೇಲೆ ದಾಳಿ ಮಾಡಿದ್ವಿ. ಪಾಕಿಸ್ತಾನದಲ್ಲಿ ಉಗ್ರರ ನೆಲೆಗಳನ್ನು ನಮ್ಮ ಸೈನಿಕರು ಸರ್ವನಾಶ ಮಾಡಿದ್ದಾರೆ. ನಮ್ಮ ಪ್ರತೀಕಾರವನ್ನು ನಾವು ಗಡಿಯಲ್ಲಿ ತೋರಿಸುತ್ತಲೇ ಬಂದಿದ್ದೇವೆ ಎಂದು ಹೇಳಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!