ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ನಾಳೆ ಚಾಲನೆ ಸಿಗಲಿದೆ. 8 ತಂಡಗಳ ನಡುವಣ ಈ ಕದನವು ಏಕದಿನ ಸ್ವರೂಪದಲ್ಲಿ ನಡೆಯುತ್ತಿರುವುದು ವಿಶೇಷ. ಹೀಗಾಗಿಯೇ ಈ ಟೂರ್ನಿಯನ್ನು ಮಿನಿ ವಿಶ್ವಕಪ್ ಎಂದು ಕರೆಯಲಾಗುತ್ತದೆ. ಅದಲ್ಲದೆ ಭಾರತೀಯ ಕ್ರಿಕೆಟ್ ತಂಡದ ನ್ಯೂ ಜರ್ಸಿ ಅನಾವರಣಗೊಂಡಿದೆ. ಅಲ್ಲದೆ ಜೆರ್ಸಿಯ ಬಲ ಭಾಗದಲ್ಲಿ ಚಾಂಪಿಯನ್ಸ್ ಟ್ರೋಫಿ ಲೋಗೊವನ್ನು ನೀಡಲಾಗಿದೆ.
ವಿಶೇಷ ಎಂದರೆ ಈ ಲೋಗೊ ಜೊತೆ ಆತಿಥ್ಯ ರಾಷ್ಟ್ರವಾದ ಪಾಕಿಸ್ತಾನದ ಹೆಸರು ಕಾಣಿಸಿಕೊಂಡಿದೆ. ಇದಕ್ಕೂ ಮುನ್ನ ಟೀಮ್ ಇಂಡಿಯಾ ಜೆರ್ಸಿ ಮೇಲೆ ಪಾಕಿಸ್ತಾನದ ಹೆಸರು ಕಾಣಿಸಿಕೊಳ್ಳುವುದಿಲ್ಲ ಎಂದು ವರದಿಯಾಗಿತ್ತು. ಆದರೆ ಐಸಿಸಿ ಟೂರ್ನಿಯಲ್ಲಿ ಆತಿಥ್ಯ ದೇಶದ ಹೆಸರು ನಮೂದಿಸುವುದು ಕಡ್ಡಾಯ. ಹೀಗಾಗಿ ಚಾಂಪಿಯನ್ಸ್ ಟ್ರೋಫಿ ಲೋಗೊ ಜೊತೆ ಪಾಕಿಸ್ತಾನದ ಹೆಸರು ಸಹ ಟೀಮ್ ಇಂಡಿಯಾ ಜೆರ್ಸಿ ಮೇಲೆ ಕಾಣಿಸಿಕೊಂಡಿದೆ.
ಒನ್ಲಿ ಇಂಡಿಯಾ:
ಚಾಂಪಿಯನ್ಸ್ ಟ್ರೋಫಿ ಜೆರ್ಸಿ ಮುಂಭಾಗದಲ್ಲಿ ಯಾವುದೇ ಜಾಹೀರಾತು ಕಾಣಿಸಿಕೊಳ್ಳುವುದಿಲ್ಲ. ಐಸಿಸಿ ನಿಯಮದ ಪ್ರಕಾರ, ಜೆರ್ಸಿ ಮುಂಭಾಗದಲ್ಲಿ ಜಾಹೀರಾತು ಪ್ರಕಟಿಸುವಂತಿಲ್ಲ. ಬದಲಾಗಿ ಆಯಾ ದೇಶಗಳ ಹೆಸರು ಮಾತ್ರ ಇರಬೇಕು.
ಅದರಂತೆ ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡದ ಜೆರ್ಸಿ ಮೇಲೆ INDIA ಎಂದು ಮಾತ್ರ ಕಾಣಿಸಿಕೊಳ್ಳಲಿದೆ. ಇನ್ನು ಈ ಜೆರ್ಸಿಯ ಮತ್ತೊಂದು ವೈಶಿಷ್ಟ್ಯವೆಂದರೆ ಭುಜದ ಮೇಲೆ ತ್ರಿವರ್ಣ ಧ್ವಜದ ಚಿತ್ರವಿರುವುದು. ಈ ವಿನ್ಯಾಸವೇ ಭಾರತ ತಂಡದ ಹೊಸ ಜೆರ್ಸಿಯನ್ನು ಭಿನ್ನವಾಗಿಸಿದೆ ಎನ್ನಬಹುದು.