ರಾಜ್ಯದಲ್ಲಿ ಪಾಕಿಸ್ತಾನ, ತಾಲಿಬಾನ್ ಸರ್ಕಾರವಿದೆ: ಮಾಜಿ ಸಚಿವ ರೇಣುಕಾಚಾರ್ಯ ಕಿಡಿ

0
Spread the love

ಮಂಡ್ಯ: ರಾಜ್ಯದಲ್ಲಿ ಪಾಕಿಸ್ತಾನ, ತಾಲಿಬಾನ್ ಸರ್ಕಾರವಿದೆ ಎಂದು ಮಾಜಿ ಸಚಿವ ರೇಣುಕಚಾರ್ಯ ಕಿಡಿಕಾರಿದ್ದಾರೆ. ಮದ್ದೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಹಿಂದೂಗಳ ಹಬ್ಬ ಆಚರಣೆಗೆ ಡಿಜೆ ಅನುಮತಿ ಕೊಡುತ್ತಿಲ್ಲ. ಆದ್ರೆ ಮೈಕ್ನಲ್ಲಿ ಹಜಾನ್ ಕೂಗಬಹುದಂತೆ ಆಗ ಯಾರಿಗೆ ಶಬ್ದಮಾಲಿನ್ಯ, ಕರ್ಕಶವಾಗುವುದಿಲ್ಲವಾ? ಭಾರತ್ ಮಾತಾ ಕೀ ಜೈ ಎಂದವರನ್ನ ಅರೆಸ್ಟ್ ಮಾಡ್ತಾರೆ.

Advertisement

ಆದ್ರೆ ದೇಶದ ಅನ್ನ ತಿಂದು ಪಾಕಿಸ್ತಾನ ಜಿಂದಾಬಾದ್ ಎನ್ನುವ ಮತಾಂಧರ ವಿರುದ್ಹ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದವರ ಕೇಸ್ ವಾಪಸ್ ಪಡೆಯುತ್ತದೆ. ರಾಜ್ಯದಲ್ಲಿ ಪ್ರಜಾಪ್ರಭುತ್ವ ಸರ್ಕಾರ ಇಲ್ಲ. ರಾಜ್ಯದಲ್ಲಿ ಪಾಕಿಸ್ತಾನ, ತಾಲಿಬಾನ್ ಸರ್ಕಾರವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ಅಧಿಕಾರದಲ್ಲಿಲ್ಲ. ರಾಹುಲ್, ಸೋನಿಯಾ ಗಾಂಧಿ ಅಣತಿಯಂತೆ ನಡೆಯುತ್ತಿದೆ.

ಕಾಂಗ್ರೆಸ್ನವರು ಆಪರೇಷನ್ ಸಿಂದೂರ್ ಬಗ್ಗೆ ಟೀಕೆ ಮಾಡ್ತಾರೆ. ಸಿದ್ದರಾಮಯ್ಯರ ಹೇಳಿಕೆಗಳು ಪಾಕಿಸ್ತಾನದಲ್ಲಿ ಪ್ರಸಾರ ಆಗುತ್ತೆ. ಕಾಂಗ್ರೆಸ್ಗೂ ಪಾಕಿಸ್ತಾನಕ್ಕೂ ನಂಟು, ವ್ಯಾಮೋಹ. ಇದೇ ಕಾರಣಕ್ಕೆ ಭಾರತ್ ಮಾತಾ ಕೀ ಜೈ ಎಂದವರನ್ನ ಅರೆಸ್ಟ್ ಮಾಡ್ತಾರೆ, ಪಾಕಿಸ್ತಾನ್ ಜಿಂದಾಬಾದ್ ಎಂದವನ್ನ ನಮ್ಮ ಬ್ರದರ್ ಅಂತಾರೆ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ, ಪರಮೇಶ್ವರ ಹುಟ್ಟಿದ ಧರ್ಮ, ದೇಶಕ್ಕೆ ಅಪಮಾನ ಮಾಡ್ತಿದ್ದಾರೆ ಎಂದು ಕಿಡಿಕಾರಿದರು.


Spread the love

LEAVE A REPLY

Please enter your comment!
Please enter your name here