ಬೆನಕನ ಅಮವಾಸ್ಯೆ ನಿಮಿತ್ತ ಪಾಲಕಿ ಉತ್ಸವ

0
Spread the love

ವಿಜಯಸಾಕ್ಷಿ ಸುದ್ದಿ, ಬೆಟಗೇರಿ: ಇಲ್ಲಿನ ಹೊಸಪೇಟ ಚೌಕದ ಶ್ರೀ ಕಾಳಿಕಾ ದೇವಿ ದೇವಸ್ಥಾನದಲ್ಲಿ ಬೆನಕನ ಅಮವಾಸ್ಯೆ ನಿಮಿತ್ತ ಪಾಲಕಿ ಉತ್ಸವ ಭಕ್ತಿ ಸೇವಾ ಕೈಂಕರ್ಯ ಜರುಗಿತು. ಬೆಟಗೇರಿ ಕಾಳಿಕಾ ದೇವಸ್ಥಾನ ಟ್ರಸ್ಟ್ ಕಮಿಟಿಯ ನಿರ್ದೇಶಕರು, ಗದಗ ಜಿಲ್ಲಾ ವಿಶ್ವಕರ್ಮ ಯುವ ಮುಖಂಡ ಮಹೇಶ ಬಡಿಗೇರ ಕುಟುಂಬ ವರ್ಗದವರು ಮತ್ತು ಅಭಿಯಂತರರಾದ ರಮೇಶ ವೀರಪ್ಪ ಆಚಾರ ದಂಪತಿಗಳು ಬೆನಕನ ಅಮವಾಸ್ಯೆಯ ಪಾಲಕಿ ಉತ್ಸವ ಭಕ್ತಿ ಸೇವೆ ವಹಿಸಿದ್ದರು.

Advertisement

ಟ್ರಸ್ಟ್ನ ಪದಾಧಿಕಾರಿಗಳಾದ ಶ್ರೀಧರ ಕೊಣ್ಣೂರ, ನಾಗಲಿಂಗಪ್ಪ ಪತ್ತಾರ, ಎನ್.ಬಿ. ಕೊಣ್ಣೂರ, ಅಶೋಕ ಸುತಾರ, ಸದಸ್ಯರಾದ ರಾಘವೇಂದ್ರ ಬಡಿಗೇರ, ವಿಜಯಕುಮಾರ ಬೆಂತೂರ, ರವಿ ಬಡಿಗೇರ, ಸತೀಶ ಹೊರಪೇಟ, ಮನೋಜ ಬೆಂತೂರ ಕಾಳಿಕಾ ಸ್ತುತಿ ಪಠಣ ಮಾಡಿದರು.

ಗಣೇಶ ಚತುರ್ಥಿ ಹಬ್ಬದ ಕುರಿತು ಸರಕಾರಿ ಪದವಿಪೂರ್ವ ಕಾಲೇಜನ ಉಪನ್ಯಾಸಕ ಮಂಜುನಾಥ ಅಕ್ಕಸಾಲಿ ವಿಶೇಷ ಉಪನ್ಯಾಸ ನೀಡಿ, ಬೆನಕನ ಅಮವಾಸ್ಯೆಯ ವಿಷೇಶತೆ, ಗಣೇಶ ಉತ್ಸವ ಆಚರಣೆಗಳ ಕುರಿತು ತಿಳಿಸಿದರು.

ಪ್ರಸಕ್ತ ವರ್ಷದ ಶರನ್ನವರಾತ್ರಿ ಉತ್ಸವ ಆಚರಣೆ ಕುರಿತು ಚರ್ಚೆ ಮಾಡಲಾಯಿತು. ಶ್ರೀ ವಿಶ್ವಕರ್ಮ ಗಾಯಿತ್ರಿ ಮಹಿಳಾ ಮಂಡಳ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಅರ್ಚಕ ಸುರೇಶ ಬಡಿಗೇರ ಮತ್ತು ಸುದ್ದಿವಾಹಿನಿ ವರದಿಗಾರ ಭೀಮನಗೌಡ ಪಾಟೀಲ, ರಮೇಶ ಬಡಿಗೇರ, ಭಾಸ್ಕರ ಕಮ್ಮಾರ, ಮಂಜುನಾಥ ಬಡಿಗೇರ, ಗಾಯಿತ್ರಿ ಮಹಿಳಾ ಮಂಡಳದ ಗೌರವಾಧ್ಯಕ್ಷರಾದ ಶೋಭಾ ಬೆಂತೂರ, ಅಧ್ಯಕ್ಷರಾದ ಭಾರತಿ ಹೊರಪೇಟ, ಪ್ರಧಾನ ಕಾರ್ಯದರ್ಶಿ ಜ್ಯೋತಿ ಬಡಿಗೇರ, ಸಹ ಕಾರ್ಯದರ್ಶಿ ವಿಜಯಲಕ್ಷ್ಮೀ ಕೊಣ್ಣೂರ, ಹಿರಿಯರಾದ ಲಕ್ಷ್ಮೀ ಕೊಣ್ಣೂರ, ಮಂಜುಳಾ ಅನಂತಪುರ, ಲಕ್ಷ್ಮೀ ಬಡಿಗೇರ, ಲತಾ ಬಡಿಗೇರ ಮುಂತಾದವರಿದ್ದರು.

ಪಾಲಕಿ ಉತ್ಸವ ಭಕ್ತಿ ಸೇವಾ ಕೈಂಕರ್ಯ ವಹಿಸಿಕೊಂಡ ಮಹೇಶ ಬಡಿಗೇರ ಮತ್ತು ರಮೇಶ ಪತ್ತಾರರನ್ನು ಸನ್ಮಾನಿಸಲಾಯಿತು. ಸಾಕ್ಷಿ ಹುಯಿಲಗೋಳ ಪ್ರಾರ್ಥಿಸಿದರು. ಐಶ್ವರ್ಯ ಶ್ರೀಧರ ಕೊಣ್ಣೂರ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಶಿಕ್ಷಕ ವಿಶ್ವನಾಥ ಕಮ್ಮಾರ ಮಾತನಾಡಿದರು. ನಿಖಿತಾ ಅಶೋಕ ಸುತಾರ ನಿರೂಪಿಸಿದರು. ಮನೋಜ ಬೆಂತೂರ ವಂದಿಸಿದರು.


Spread the love

LEAVE A REPLY

Please enter your comment!
Please enter your name here