ಸಾಮೂಹಿಕ ವಿವಾಹಗಳ ಕರಪತ್ರ ಬಿಡುಗಡೆ

0
Spread the love

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಮುಳಗುಂದ ಪಟ್ಟಣದಲ್ಲಿ ಸೆಪ್ಟೆಂಬರ್ 14ರಂದು ನಡೆಯಲಿರುವ ಸಾಮೂಹಿಕ ವಿವಾಹಗಳ ಕರಪತ್ರ ಬಿಡುಗಡೆ ಮಾಡಲಾಯಿತು. ಅಂಜುಮನ ಆಡಳಿತ ಮಂಡಳಿ ಸದಸ್ಯರು ಹಾಗೂ ಖಿದ್ಮತ-ಎ-ಮಿಲ್ಲತ ಸದಸ್ಯರು ಸ್ಥಳೀಯ ದಾವಲಮಲ್ಲಿಕ ದರ್ಗಾದಲ್ಲಿ ಫಾತೀಹಾಖಾನಿ ಮಾಡಿ ಕರಪತ್ರ ಬಿಡುಗಡೆ ಮಾಡಿದರು.

Advertisement

ಅಂಜುಮನ ಅಧ್ಯಕ್ಷ ತಾಜುದ್ದೀನ ಕಿಂಡ್ರೀ ಮಾತನಾಡಿ, ಗುಲ್ಬರ್ಗದ ಹಜರತ ಖ್ವಾಜಾ ಬಂದೇನವಾಜ ವಂಶಸ್ಥರಾದ ಹಜರತ ಹಫೀಜ ಸೈಯದ ಮಹಮ್ಮದ ಅಲಿ ಅಲ್‌ಹುಸೇನ ಸಾಹೇಬ್ ಅವರ ಸಮ್ಮುಖದಲ್ಲಿ ಹಾಗೂ ಹೊಸಳ್ಳಿ ಬೂದೀಶ್ವರ ಮಹಾಸಂಸ್ಥಾನಮಠದ ಪ.ಪೂ. ಶ್ರೀ ಅಭಿನವ ಬೂದೀಶ್ವರ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸುವರು.

ಕಾನೂನು, ಪ್ರವಾಸೋದ್ಯಮ, ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್.ಕೆ. ಪಾಟೀಲ ಅವರ ಘನ ಉಪಸ್ಥಿತಿಯಲ್ಲಿ ಈ ಸಾಮೂಹಿಕ ವಿವಾಹಗಳು ನಡೆಯಲಿವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎ.ಡಿ. ಮುಜಾವರ, ಹೈದರ ಖವಾಸ, ಮುನ್ನಾ ಡಾಲಾಯತ, ಎಂ.ಎ. ಖಾಜಿ, ದಾವೂದ ಜಮಾಲ್, ದಾವಲಸಾಬ ಲಕ್ಷ್ಮೇಶ್ವರ, ರಾಜೇಸಾಬ ಸೈಯದಬಡೆ, ಇಮಾಮಹುಸೇನ ಮುಜಾವರ, ಮಾಬುಲಿ ದುರ್ಗಿಗುಡಿ, ಇಸಾಕ ಹೊಸಮನಿ, ಮೌಲಾಲಿ ಢಾಲಾಯತ, ಯೂಸುಫ್ ಮುಜಾವರ, ಮದಾರ ಕಲಕುಟ್ರಿ, ದಾವಲ ಲಾಡಸಾಬನವರ ಮುಂತಾದವರು ಹಾಜರಿದ್ದರು.


Spread the love

LEAVE A REPLY

Please enter your comment!
Please enter your name here