ಪಂಚಮಸಾಲಿ ಯುವ ಘಟಕದಿಂದ ವಿಜಯೋತ್ಸವ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: 2024ರ ಡಿಸೆಂಬರ್ 10ರಂದು ಬೆಳಗಾವಿ ಸುವರ್ಣಸೌಧ ಮುಂಭಾಗದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಪ್ರಕರಣದ ನ್ಯಾಯಾಂಗ ತನಿಖೆಗೆ ತಡೆ ನೀಡಬೇಕು ಎಂದು ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿ, ಪ್ರಕರಣದ ನ್ಯಾಯಾಂಗ ತನಿಖೆ ನಡೆಸಬೇಕೆಂಬ ಆದೇಶವನ್ನು ಧಾರವಾಡ ಹೈಕೋರ್ಟ್ ಎತ್ತಿ ಹಿಡಿದಿದೆ.

Advertisement

ಕೂಡಲಸಂಗಮ ಮಹಾಪೀಠದ ಜಗದ್ಗುರು ಲಿಂಗಾಯತ ಪಂಚಮಸಾಲಿ ಪರಮಪೂಜ್ಯರಾದ ಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಶ್ರೀಗಳ, ಎಲ್‌ಪಿಎಪಿ ವಕೀಲರ ಸಂಘ ಮತ್ತು ರಾಜ್ಯದ ಲಿಂಗಾಯತ ಪಂಚಮಸಾಲಿ ಹೋರಾಟಗಾರರು ಹಾಗೂ ಸಮಾಜ ಬಾಂಧವರೆಲ್ಲರ ಪರಿಶ್ರಮವನ್ನು ಸ್ಮರಿಸಿ ನಗರದಲ್ಲಿ ಜಿಲ್ಲಾ ಲಿಂಗಾಯತ ಪಂಚಮಸಾಲಿ ಸಮಾಜದ ಯುವ ಘಟಕದ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಗದಗ ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಯ್ಯಪ್ಪ ಮ.ಅಂಗಡಿ, ಉಪಾಧ್ಯಕ್ಷ ಬಸವರಾಜ ಗಡ್ಡೆಪ್ಪನವರ, ಪದಾಧಿಕಾರಿಗಳಾದ ನಿಂಗಪ್ಪ ಹುಗ್ಗಿ, ಕೆ.ವಿ. ಗದುಗಿನ, ಚನ್ನವೀರಪ್ಪ ಮಳಗಿ, ನಗರಸಭೆ ಸದಸ್ಯ ಮಾಹಾಂತೇಶ ನಲವಡಿ, ಶಿವರಾಜಗೌಡ ಹಿರೇಮನಿ (ಪಾಟೀಲ), ಗ್ರಾಮೀಣ ಅಧ್ಯಕ್ಷರಾದ ಮಂಜುನಾಥ ಗುಡದೂರ, ರಾಜು ಜಕ್ಕನಗೌಡ್ರ, ಚೇತನ ಅಬ್ಬಿಗೇರಿ, ಚಂದ್ರು ಪಾಟೀಲ, ಪ್ರಶಾಂತ ನೇರಗಲ್ಲ, ಮಂಜು ಬಾಣದ, ರಾಜು ರೊಟ್ಟಿ, ಸಂಗಮೇಶ ಗೂಂದಿ, ನಿಂಗನಗೌಡ ಮಾಲಿಪಾಟೀಲ, ಸಂತೋಷ ಕೊಪ್ಪದ, ಶರಣಪ್ಪ ಮರಿಗೌಡ್ರ, ಅಶೋಕ ತೋಟದ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here