ವಿಜಯಸಾಕ್ಷಿ ಸುದ್ದಿ, ಗದಗ : ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಗರುಡಗಂಬಕ್ಕೆ ಪಂಚಾಮೃತ ಅಭಿಷೇಕ ಹಾಗೂ ಶ್ರೀ ರಾಮತಾರಕ ಹೋಮವನ್ನು ನೆರವೇರಿಸಲಾಯಿತು.
Advertisement
ಶ್ರೀ ರಾಮತಾರಕ ಹೋಮವು ಗದುಗಿನ ಗಂಗಾಧರ ಶಾಸ್ತ್ರೀ ಹಾಗೂ ಗುರುಪ್ರಸಾದ್ ಭಟ್ ಅವರ ನೇತೃತ್ವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ರಾಮಣ್ಣ ದೇಸಾಯಿ, ಕರ್ನಾಟಕ ರಾಜ್ಯ ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಎಚ್.ಬಾಬರಿ, ಸಂಗಪ್ಪ ಮಳ್ಳಿ, ಬಸಪ್ಪ ಸತ್ಯಪ್ಪನವರ, ಚಿನ್ನಪ್ಪ ಬಿಸನಳ್ಳಿ, ಯಲ್ಲಪ್ಪ ಜೋಗಿನ ಶೇಖಪ್ಪ ಪೂಜಾರ, ಹನುಮಪ್ಪ ಪೂಜಾರ ಸೇರಿದಂತೆ ಭಕ್ತರು ಪಾಲ್ಗೊಂಡಿದ್ದರು.