HomeAgricultureಮರೆಯಾದ ರೈತರ ಮಿತ್ರ ಪಾಪಸಕಳ್ಳಿ

ಮರೆಯಾದ ರೈತರ ಮಿತ್ರ ಪಾಪಸಕಳ್ಳಿ

For Dai;y Updates Join Our whatsapp Group

Spread the love

ಪ್ರಕೃತಿಯ ಮಡಿಲಲ್ಲಿ ಎಷ್ಟೋ ಸಸ್ಯಗಳು ಇವೆ. ಅದರಲ್ಲಿ ಪಾಪಾಸುಕಳ್ಳಿಯೂ ಒಂದು. ಅಂದರೆ ಈಗಿನ ಡ್ರ‍್ಯಾಗನ್ ಫ್ರೂಟ್ ಮೊದಲು ನಮ್ಮ ಅಜ್ಜ- ಅಜ್ಜಿಯ ಕಾಲದಲ್ಲಿ ಹೊಲದಲ್ಲಿ, ಹಿತ್ತಲಲ್ಲಿ, ಈ ಪಾಪಸಕಳ್ಳಿಯ ಗಿಡ ನಮಗೆ ಸಿಗುತ್ತಿತ್ತು. ಆದರೆ ಕಾಲಮಾನ ಬದಲಾಗದಂತೆ ಈ ಪಾಪಸಕಳ್ಳಿಯ ಗಿಡಗಳು ಮರೆಯಾಗಿ ಹೋದವು. ನಾವು ಚಿಕ್ಕವರಿದ್ದಾಗ ಈ ಗಿಡದಿಂದ ಹಣ್ಣುಗಳನ್ನು ಕಿತ್ತುಕೊಂಡು ನಾಲಿಗೆ ಮೇಲೆ ಮುಳ್ಳುಗಳನ್ನು ಚುಚ್ಚಿಸಿಕೊಂಡು ಅಳುತ್ತಾ ಅಮ್ಮ-ಅಪ್ಪನಿಂದ ಹೊಡೆಸಿಕೊಂಡು ನಂತರ ಮುಳ್ಳುಗಳನ್ನು ತೆಗೆಸಿರುವುದು ನೆನಪಿದೆ.

ಪಾಪಸಕಳ್ಳಿ ಗಿಡವನ್ನು ರೈತ ಮಿತ್ರ ಎಂದು ಸಹ ಕರೆಯುತ್ತಿದ್ದರು. ಇದು ಸಂಪೂರ್ಣ ಮುಳ್ಳಿನಿಂದ ಕೂಡಿರುತ್ತದೆ. ನನಗೆ ನೆನಪಿರೋದು, ಈ ಗಿಡವನ್ನು ಪಾಪಸಕಳ್ಳಿ, ಡಬ್ಬುಗಳ್ಳಿ, ಡಬಗೊಳ್ಳಿ ಎಂದು ಕರೆಯುತ್ತಿದ್ದರು. ನಾವು ಚಿಕ್ಕವರಿದ್ದಾಗ ಶಾಲೆಗೆ ಹೋಗುವಾಗ ನಮ್ಮ ಶಾಲೆಯ ಹಿಂದೆ ಬಯಲು ಪ್ರದೇಶದಲ್ಲಿ ಎಲ್ಲೆಂದರಲ್ಲಿ ಪಾಪಸಕಳ್ಳಿಯ ಗಿಡಗಳು ಇರುತ್ತಿದ್ದವು. ಮಧ್ಯಾಹ್ನ ಶಾಲೆಯಲ್ಲಿ ವಿಶ್ರಾಂತಿಗೆ ಎಂದು ಬಿಡುವಾಗ ನಮ್ಮ ಸ್ನೇಹಿತರು ಎಲ್ಲರೂ ಸೇರಿಕೊಂಡು ಈ ಗಿಡದ ಹಣ್ಣುಗಳನ್ನು ತಿನ್ನಲು ಹೋಗುತ್ತಿದ್ದೆವು. ಬಹಳ ಸೂಕ್ಷ್ಮದಿಂದ ಹಣ್ಣುಗಳನ್ನು ಕಿತ್ತು ಎಲ್ಲವನ್ನೂ ಸಂಹಗ್ರಹಿಕೊಂಡು ಒಂದು ಕಡೆ ಕೂಡಿಟ್ಟು ಯಾವುದೋ ಒಂದು ಗಿಡದ ತಪ್ಪಲಿನಿಂದ ಬಡಿದು ಈ ಹಣ್ಣಿನ ಮೇಲಿರುವ ಮುಳ್ಳುಗಳನ್ನು ತೆಗೆಯುತ್ತಿದ್ದೆವು.

ಇತ್ತು ಹಾಡು ಹಾಡಿ ಗಿಡದ ತಪ್ಪಲಿನಿಂದ ಬಡಿದು ಮುಳ್ಳುಗಳು ಹೋದ ಮೇಲೆ ಎಲ್ಲರೂ ಪಾಪಸಕಳ್ಳಿ ಹಣ್ಣುಗಳನ್ನು ತಿನ್ನುವಷ್ಟರಲ್ಲಿ ಶಾಲೆಯ ವಿಶ್ರಾಂತಿ ಮುಗಿದು ಹೋಗಿರುತ್ತಿತ್ತು. ನಂತರ ಶಾಲೆಗೆ ಹೋದರೆ ಮಾಸ್ತರ್ ನಮ್ಮ ಬಾಯಿಯ ಕೆಂಪು ಅವತಾರ ನೋಡಿ `ಲೇ ಮಕ್ಕಳ್ಳಾ ಏನು ತಿಂದು ಬಂದಿದ್ದೀರಾ… ಆ ಗಿಡದ ಹಣ್ಣುಗಳು ಮುಳ್ಳಿಂದ ಕೂಡಿರುತ್ತದೆ. ಇನ್ನೊಮ್ಮೆ ಹೋದರೆ ಅಷ್ಟೇ’ ಎಂದು ಕೈ ಮುಂದೆ ಮಾಡಿ ಹೊಡೆಯುತ್ತಿದ್ದರು.

ಜೂನ್ ತಿಂಗಳಲ್ಲಿ ಮುಂಗಾರು ಮಳೆ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಪಾಪಸಕಳ್ಳಿಯ ಗಿಡಗಳು ಹಚ್ಚಹಸಿರಿಂದ ಕೂಡಿ ಹಣ್ಣುಗಳು ಬಿಟ್ಟಿರುತ್ತಿತ್ತು. ಹೊಲದಲ್ಲಿ ಬಿತ್ತನೆ ಮಾಡುವಾಗ ಮುಂಜಾನೆ ಸಮಯದಲ್ಲಿ ನಮ್ಮ ಅಪ್ಪ-ಅಮ್ಮಂದಿರು ಹೋಗುತ್ತಿದ್ದರು. ಅವರು ಮುಂಜಾನೆ ಬೇಗನೆ ಹೋಗುವಾಗ ಮನೆಯಲ್ಲಿ ಬುತ್ತಿಗಂಟು ಮರೆತು ಅವಸರದಲ್ಲಿ ಹಾಗೇ ಹೋಗುತ್ತಿದ್ದರು. ಬುತ್ತಿಗಂಟು ಕೊಟ್ಟು ಬಾ ಎಂದು ನಮ್ಮ ಅಕ್ಕ ಹೇಳುತ್ತಿರುವಾಗ ನಾನು ಬುತ್ತಿಗಂಟು ತೆಗೆದುಕೊಂಡು ಹೊಲಕ್ಕೆ ಹೋಗುವಾಗ ನಮ್ಮ ಊರಿನಿಂದ ನಮ್ಮ ಹೊಲದವರೆಗೂ ಸಾಲಗಿ ಪಾಪಸಕಳ್ಳಿಗಳ ಗಿಡಗಳು ಇರುತ್ತಿತ್ತು. ನಮ್ಮ ಹೊಲದಲ್ಲಿಯೂ ಐದು ಆರು ಪಾಪಸಕಳ್ಳಿ ಗಿಡಗಳು ಇತ್ತು.

ನಮ್ಮ ಅಪ್ಪ ಬಿತ್ತನೆ ಮಾಡುವಾಗ ನಾನು ಪಾಪಸಕಳ್ಳಿಯ ಹಣ್ಣುಗಳನ್ನು ಮುರಿದು ತಿನ್ನುವಾಗ ಮುಳ್ಳುಗಳನ್ನು ನಾಲಿಗೆ ಮೇಲೆ ಹಚ್ಚಿಸಿಕೊಂಡಿದ್ದೆ. ನಂತರ ತಂದೆಯ ಕೈಲಿ ಬಡಿಸಿಕೊಂಡು ಅಮ್ಮನಿಂದ ಮುಳ್ಳುಗಳನ್ನು ತೆಗೆಸಿಕೊಂಡಿದ್ದು ಈಗಲೂ ನೆನಪಿದೆ!

– ಸುರೇಶ ಎಸ್.ಲಮಾಣಿ.

ಛಾಯಾ ಗ್ರಾಹಕರು, ಲಕ್ಷ್ಮೇಶ್ವರ


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!