Devaragudda Karnika 2024: ’ ‘ಆಕಾಶನ ಚಿಗುರೀತಲೇ ಬೇರೆಲ್ಲಾ ಮುತ್ತಾಯಿತಲೇ ಪರಾಕ್’; ಗೊರವಯ್ಯ ನುಡಿದ ಕಾರ್ಣಿಕ!

0
Spread the love

ಹಾವೇರಿ:-ರಾಣೆ ಬೆನ್ನೂರು ತಾಲೂಕಿನ ಸುಕ್ಷೇತ್ರ ದೇವರಗುಡ್ಡ ಮಾಲತೇಶ ಸ್ವಾಮಿ ಕಾರ್ಣಿಕೋತ್ಸವ ನಡೆದಿದ್ದು, ’ ಆಕಾಶನ ಚಿಗುರೀತಲೇ ಬೇರೆಲ್ಲಾ ಮುತ್ತಾಯಿತಲೇ ಪರಾಕ್ ’ ಎಂದು ಗೊರವಪ್ಪ ವರ್ಷದ ಐತಿಹಾಸಿಕ ಕಾರ್ಣಿಕ ಭವಿಷ್ಯವಾಣಿ ನುಡಿದಿದ್ದಾರೆ.

Advertisement

ಮಳೆ, ಬೆಳೆ, ರಾಜಕೀಯ, ಅನಾಹುತಗಳ ಬಗ್ಗೆ ಗೊರವಪ್ಪ, ಕಾರ್ಣಿಕ ನುಡಿಯುವ ಭವಿಷ್ಯವಾಣಿಯನ್ನು ನಿಜವಾಗುತ್ತದೆ ಎಂಬ ನಂಬಿಕೆಯಿದೆ. ಕಾರ್ಣಿಕೋತ್ಸವಕ್ಕೂ ಮುನ್ನ 9 ದಿನ ಉಪವಾಸವಿದ್ದ ಗೊರವಯ್ಯ ಇಂದು 21 ಅಡಿ ಬಿಲ್ಲನ್ನೇರಿ ಗೊರವಯ್ಯ ನಾಗಪ್ಪಜ್ಜ ಉರ್ಮಿ ಕಾರ್ಣಿಕ ನುಡಿದಿದ್ದಾರೆ.

ಇನ್ನೂ ಗೊರವಯ್ಯ ನಾಗಪ್ಪಜ್ಜ ಅವರು ನುಡಿದಿರುವ ಪ್ರಸಕ್ತ ವರ್ಷದ ಭವಿಷ್ಯವಾಣಿಯ ವಿಶ್ಲೇಷಣೆ ಮಾಡಿದ ಪ್ರಧಾನ ಅರ್ಚಕರಾದ ಅರ್ಚಕ ಸಂತೋಷಭಟ್ಟ, ಆಕಾಶದತ್ತ ಚಿಗುರಿತಲೇ, ಬೇರೆಲ್ಲಾ ಮುದ್ದಾತಲೇ ಪರಾಕ್ ಅಂತ ಕಾರ್ಣೀಕ ಆಗಿದೆ. ಗೊರವಯ್ಯನವರು 9 ದಿನ ಉಪವಾಸ ಇದ್ದು ಬಿಲ್ಲನ್ನೇರಿ ಕಾರ್ಣೀಕ ನುಡೀತಾರೆ. ‘ಆಕಾಶದತ್ತ ಚಿಗುರಿತಲೆ’ ಎಂದರೆ ಒಳ್ಳೆ ಮಳೆ ಆಗುತ್ತೆ, ‘ಬೇರೆಲ್ಲ ಮುದ್ದಾಯಿತಲೇ’ ಅಂದರೆ ರೈತರಿಗೆ ಒಳ್ಳೆ ಬೆಳೆ ಬರುತ್ತೆ ಅದನ್ನು ತೆಗೆದುಕೊಳ್ಳೋ ಫಲಾನುಭವಿಗಳಿಗೂ ಒಳ್ಳೆಯದಾಗುತ್ತೆ ಅಂತಾ ವಿಶ್ಲೇಷಣೆ ಮಾಡಬಹುದು.

ರಾಜಕೀಯವಾಗಿ ಹೇಳುವುದಾದರೆ ಆಕಾಶದತ್ತ ಚಿಗುರಿತಲೇ ಎಂದರೆ, ಈಗಿರುವ ನಾಯಕತ್ವ ಆಕಾಶದತ್ತ ಚಿಗುರಿಬಿಟ್ಟಿದೆ, ಬೇರೆಲ್ಲಾ ಮುದ್ದಾಯಿತಲೇ ಎಂದರೆ ಅವರಿಗೆಲ್ಲಾ ಬೆನ್ನೆಲುಬಾಗಿ ನಿಂತಿರೋದು ನೀವೆಲ್ಲಾ ನೋಡಿರಬಹುದು. ಕಾನೂನು ವ್ಯವಸ್ಥೆಯಲ್ಲಿ ಏನು ಬದಲಾವಣೆ ಆದರೂ ಕೂಡಾ ಈಗಿರುವ ನಾಯಕತ್ವ ಹೇಳಿದಂಗೆ ಅವರು ಒಪ್ಪಿಕೊಳ್ತಾರೆ ಅಂತ ಹೇಳಬಹುದು. ಅಂದರೆ ಆಕಾಶದತ್ತ ಚಿಗುರಿರೋ ಗಿಡ ಹೇಳಿದಂಗೆ ಬೇರುಗಳು ಒಪ್ಪಿಕೊಳ್ಳುತ್ತವೆ.. ಹೀಗೆ ರಾಜಕೀಯವಾಗಿ ವಿಶ್ಲೇಷಣೆ ಮಾಡಬಹುದು ಎಂದು ಹೇಳಿದ್ದಾರೆ.


Spread the love

LEAVE A REPLY

Please enter your comment!
Please enter your name here