ಬೆಂಗಳೂರು: ಗೃಹ ಸಚಿವ ಪರಮೇಶ್ವರ್ ಸಂಸ್ಥೆ ಮೇಲೆ ಇಡಿ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಪರಮೇಶ್ವರ್ ದಲಿತ ನಾಯಕರು. ರಾಜ್ಯದ ಗೃಹ ಸಚಿವರು. ಅವರನ್ನು ಉದ್ದೇಶ ಪೂರಕವಾಗಿ ಟಾರ್ಗೆಟ್ ಮಾಡಲಾಗಿದೆ. ಯಡಿಯೂರಪ್ಪ ಹಾನೆಸ್ಟಾ? ವಿಜಯೇಂದ್ರ ಹಾನೆಸ್ಟಾ? ಕುಮಾರಸ್ವಾಮಿ ಹಾನೆಸ್ಟಾ? ಅವರ ಮೇಲೆ ರೇಡ್ ಯಾಕಿಲ್ಲಾ? ಕಾಂಗ್ರೆಸ್‌ನ ಹಿಂದುಳಿದ ದಲಿತ ನಾಯಕರ ಮೇಲೆ ದಾಳಿ ಆಗ್ತಿದೆ. ದಲಿತ ನಾಯಕರ ಟಾರ್ಗೆಟ್ ಮಾಡಿದ್ದಾರೆ ಅನ್ನಿಸುತ್ತೆ. ಮೊದಲು ಐಟಿಯವರು ಮಾಡಿದ್ದರು, ಈಗ ಇಡಿ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಮಳೆಹಾನಿ ವೀಕ್ಷಣೆಗೆ ನಾನು ಹೋಗುವ ಸ್ಥಳಕ್ಕೆ ರೆಡ್ ಕಾರ‍್ಪೆಟ್ ಹಾಕಿದ್ದು ಸುಳ್ಳು. ಅದು ಬಿಜೆಪಿ ಸೃಷ್ಟಿ. ನಾನು ಹೋದಾಗ ರೆಡ್ ಕಾರ‍್ಪೆಟ್ ಇರಲಿಲ್ಲ. ನಾನು ಹೋಗುವಾಗ ಎಲ್ಲಿತ್ತು? ಬಿಜೆಪಿಯವರೇ ರೆಡ್ ಕಾರ‍್ಪೆಟ್ ಹಾಕಿರುವುದು, ಅವರೇ ಮಾಡಿರುವುದು. ರೆಡ್ ಕಾರ‍್ಪೆಟ್ ಹಾಕಿದ್ದರೆ ತಪ್ಪು. ಆದರೆ, ನಾನಂತು ನೋಡಿಲ್ಲ. ಆ ರೀತಿ ವಿಡಿಯೋ ಮಾಡಿದ್ದರೆ ಅದು ಬಿಜೆಪಿಯವರೇ ಮಾಡಿದ್ದು ಎಂದು ಆರೋಪಿಸಿದರು.
ಪರಮೇಶ್ವರ್ ಪ್ರಕರಣಕ್ಕೆ ರನ್ಯಾ ರಾವ್ ಕೇಸ್ ಲಿಂಕ್ ಆರೋಪ ಬಗ್ಗೆ ಮಾತನಾಡಿ, ಅಶೋಕ್ ಗಂಭೀರವಾಗೆ ಇಲ್ಲ. ಗಂಭೀರ ಆರೋಪ ಹೇಗೆ ಮಾಡ್ತಾರೆ? ಅಶೋಕ್ ಅವರೇ ಇಡಿ ದಾಳಿ ಮಾಡಿಸಿರಬಹುದು ಎಂದು ಟಾಂಗ್ ಕೊಟ್ಟರು.