ಬೆಂಗಳೂರು: ಕುಖ್ಯಾತ ಮೊಬೈಲ್ ಕಳ್ಳನನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಆಂದ್ರ ಪ್ರದೇಶದ ಈಸ್ಟ್ ಗೋದವರಿ ನಿವಾಸಿ ನಾಗಿಲ್ಲಾ ರವಿತೇಜ ಬಂಧಿತ ಮೊಬೈಲ್ ಕಳ್ಳನಾಗಿದ್ದು, ಮೊಬೈಲ್ ಕಳ್ಳತನ ಮಾಡಿ ಎಸ್ಕೇಪ್ ಆಗ್ತಿದ್ದನು. ಪ್ಹೀಕ್ ಹವರ್ ನಲ್ಲಿ ರಶ್ ಇರೋ ಬಸ್ ಗಳಲ್ಲಿ ಪ್ರಯಾಣ ಮಾಡಿ ಮೊಬೈಲ್ ಕಳವು ಮಾಡಿ ತಕ್ಷಣ ಸ್ವಿಚ್ ಆಪ್ ಮಾಡ್ತಿದ್ದನು ಈ ಆರೋಪಿ,
Advertisement
ದೂರುಗಳು ದಾಖಲಾದ ಹಿನ್ನೆಲೆ ಬಸ್ ನಲ್ಲಿ ಮಫ್ತಿಯಲ್ಲಿ ಪ್ರಯಾಣ ಮಾಡ್ತಿದ್ದ ಪೊಲೀಸ್ರು. ಆ ವೇಳೆ ಆರೋಪಿಯ ಕೈಚಳಕ ಪ್ರದರ್ಶನವಾಗಿತ್ತು, ಕೂಡ್ಲೇ ಆರೋಪಿಯನ್ನ ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ 10 ಲಕ್ಷ ಮೌಲ್ಯದ ವಿವಿಧ ಮಾಡೆಲ್ ನ 64 ಮೊಬೈಲ್ ಗಳ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.