ವಿಜಯಸಾಕ್ಷಿ ಸುದ್ದಿ, ಮುಳಗುಂದ: ತಂದೆ-ತಾಯಿ, ಗುರುಗಳು ಸಾಕ್ಷಾತ್ ದೇವರು ಎಂದು ಧಾರವಾಡ ಅಪರ ಆಯುಕ್ತರ ಕಛೇರಿಯ ಯೋಜನಾ ಸಹಾಯಕ ಪ್ರವೀಣ ಬಿರಾದಾರ ಹೇಳಿದರು.
ಅವರು ಪಟ್ಟಣದ ಸರಕಾರಿ ಪ್ರೌಢಶಾಲೆ (ಆರ್‌ಎಂಎಸ್‌ಎ)ಗೆ ಅಗತ್ಯವಿರುವ ಪ್ರಿಂಟರ್, ಸಿಪಿಯು, ಮಾನಿಟರ್ ದೇಣಿಗೆ ನೀಡಿ ಮಾತನಾಡಿದರು.
ಸರಕಾರಿ ಶಾಲೆಗಳಲ್ಲಿ ಬಡ ಮಕ್ಕಳು ಅಭ್ಯಾಸ ಮಾಡುತ್ತಿದ್ದು, ಸರಕಾರಿ ಶಾಲೆಗಳ ಅಭಿವೃದ್ಧಿಗೆ ಸಹಾಯ ಸಹಕಾರ ಅಗತ್ಯವಿದೆ. ನಮ್ಮ ದುಡಿಮೆಯ ಸ್ವಲ್ಪ ಭಾಗವಾದರೂ ಸಮಾಜದ ಒಳತಿಗಾಗಿ ಮೀಸಲಿಡಬೇಕು. ಮಕ್ಕಳು ನಿತ್ಯ ತಂದೆ-ತಾಯಿ, ಗುರುಗಳನ್ನು ಸಾಕ್ಷಾತ್ ದೇವರಂತೆ ಕಾಣಬೇಕು. ಸರಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕ ವೃಂದ ಇರುವುದರಿಂದ, ಮಕ್ಕಳು ಗುರುಗಳು, ತಂದೆ-ತಾಯಿಗಳು ನೀಡುವ ಸಂಸ್ಕಾರ, ಮೌಲ್ಯಯುತ ಮಾತುಗಳನ್ನು ನಿತ್ಯ ಬದುಕಿನಲ್ಲಿ ಅಳವಡಿಸಿಕೊಂಡು ಸಾಗಿದಾಗ ಬದುಕು ಸುಂದರವಾಗುತ್ತದೆ ಎಂದರು.
ಶಾಲಾ ಪ್ರಧಾನಗುರು ಎಸ್.ಎಚ್. ಪುಜಾರ, ಮುಳಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಸುಂಕಾಪೂರ, ಎಸ್‌ಡಿಎಂಸಿ ಅಧ್ಯಕ್ಷ ಎಂ.ಎಚ್. ಮಾನೇಗಾರ, ನೂರಹ್ಮದ ನದಾಫ್, ಎಸ್.ವಿ. ತಿಮ್ಮಾಪೂರ, ವಿ.ಟಿ. ಅಂಗಡಿ, ಬಸವರಾಜ ಗೌರಿಮಣಿ ಇದ್ದರು.