ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಆ್ಯಂಗ್ಲೋ ಉರ್ದು ಬಾಲಕಿಯರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಪಾಲಕರ ಸಭೆಯನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಿಕ್ಷಣ ಸಂಸ್ಥೆಯ ಸದಸ್ಯ ಪ್ರೊ. ಎ.ಎಂ. ಮುಲ್ಲಾ, ಇಂದಿನ ಮಕ್ಕಳೇ ನಾಳಿನ ನಾಗರಿಕರು. ಆದ್ದರಿಂದ ಮಕ್ಕಳು ಈಗಿನಿಂದಲೇ ಅಭ್ಯಾಸದೊಂದಿಗೆ ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು. ಮಕ್ಕಳು ಯಶಸ್ಸು ಹೊಂದಲು ಪಾಲಕರು, ಶಿಕ್ಷಕರು ಹಾಗೂ ಮಕ್ಕಳು ಈ ಮೂವರಲ್ಲಿ ಹೊಂದಾಣಿಕೆ ಅವಶ್ಯವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಶಿಕ್ಷಕರು ಹೇಳಿದ ಪ್ರತಿಯೊಂದು ವಿಷಯವನ್ನು ಗಮನವಿಟ್ಟು ಕೇಳಿ ಮನೆಯಲ್ಲಿ ಅಭ್ಯಾಸ ಮಾಡಿದರೆ ಯಶಸ್ಸು ಸಿಕ್ಕೆ ಸಿಗುತ್ತದೆ ಎಂದರು.
ಸಂಸ್ಥೆಯ ಸದಸ್ಯರಾದ ಜನಾಬ ಸಯ್ಯದ ಇಸ್ಮಾಯಲ್ ಬಿಜಾಪುರ ಮಾತನಾಡುತ್ತ, ಪಾಲಕರು ತಮ್ಮ ಮಕ್ಕಳ ಅಭ್ಯಾಸದ ಬಗ್ಗೆ ಸದಾ ಕಾಳಜಿಯನ್ನು ವಹಿಸಿ. ಮಕ್ಕಳು ಮೊಬೈಲ್‌ನಿಂದ ದೂರ ಇರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಸಂಸ್ಥೆಯ ಸದಸ್ಯರುಗಳಾದ ಹಾಜಿ ಮಹಮ್ಮದ ಇಕ್ಬಾಲ್ ಹಣಗಿ ಹಾಗೂ ಉಭಯ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರುಗಳಾದ ಎಲ್.ಆರ್. ಇಟಗಿ ಮತ್ತು ಎಂ.ಎ. ರಿಕಾರ್ಟಿ, ಶಿಕ್ಷಕ, ಶಿಕ್ಷಕಿಯರು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು, ಪಾಲಕರು ಉಪಸ್ಥಿತರಿದ್ದರು.
ಎಲ್.ಅರ್. ಇಟಗಿ ಸ್ವಾಗತಿಸಿದರು. ಝಡ್.ಎ. ಮುಲ್ಲಾ ನಿರೂಪಿಸಿದರು. ಎಂ.ಎ. ರಿಕಾರ್ಟಿ ವಂದಿಸಿದರು.


