ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಆ್ಯಂಗ್ಲೋ ಉರ್ದು ಬಾಲಕ ಹಾಗೂ ಬಾಲಕಿಯರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಪಾಲಕರ ಸಭೆಯನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ಷಮದ ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಸಂಸ್ಥೆಯ ಚೇರ್ಮನ್ ಹಾಜಿ ಸರ್ಫರಾಜ ಅಹ್ಮದ ಎಸ್. ಉಮಚಗಿ ಮಾತನಾಡಿ, ಮಕ್ಕಳು ನಿರ್ದಿಷ್ಟ ಗುರಿ ಮುಟ್ಟಲು ಸತತ ಅಭ್ಯಾಸವನ್ನು ಮಾಡಬೇಕು. ಮಕ್ಕಳು ತಮ್ಮಲ್ಲಿ ನೈತಿಕ ಮೌಲ್ಯವನ್ನು ಅಳವಡಿಸಿಕೊಂಡು ತಂದೆ-ತಾಯಿಗಳ ಹಾಗೂ ಶಿಕ್ಷಕರ ಮಾರ್ಗದರ್ಶನದಲ್ಲಿ ಜೀವನ ಸಾಗಿಸಬೇಕು. ಎಲ್ಲ ಪಾಲಕರು ತಮ್ಮ ಮಕ್ಕಳ ಅಭ್ಯಾಸದ ಬಗ್ಗೆ ಸದಾ ಕಾಳಜಿ ವಹಿಸಿದರೆ ಮಾತ್ರ ಮಕ್ಕಳು ತಮ್ಮ ಗುರಿ ಮುಟ್ಟಲು ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಸ್ಥೆಯ ಸದಸ್ಯರಾದ ಪ್ರೊ. ಎ.ಎಂ. ಮುಲ್ಲಾ ಮಾತನಾಡುತ್ತಾ, ವಿದ್ಯಾರ್ಥಿಗಳು ಯಶಸ್ಸು ಹೊಂದಲು ಬಾಲಕ, ಪಾಲಕ, ಶಿಕ್ಷಕ – ಈ ಮೂವರಲ್ಲಿ ಹೊಂದಾಣಿಕೆ ಅವಶ್ಯಕವಾಗಿದೆ. ಶಿಕ್ಷಕರು ಹೇಳಿದ್ದನ್ನು ಮಕ್ಕಳು ಗಮನವಿಟ್ಟು ಕೇಳಬೇಕು ಮತ್ತು ಮನೆಯಲ್ಲಿ ಮಕ್ಕಳು ಅಭ್ಯಾಸ ಮಾಡಲು ಪೂರಕ ವಾತಾವರಣವನ್ನು ಪಾಲಕರು ನಿರ್ಮಿಸಿಕೊಟ್ಟು ಸದಾ ಬೆಂಬಲವಾಗಿ ನಿಲ್ಲಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸದಸ್ಯರಾದ ಹಾಜಿ ರಾಜೇಸಾಬ ಬಾಗಲಕೋಟೆ, ಜನಾಬ ಶಹನವಾಜ್ ಎಸ್. ಉಮಚಗಿ, ಹಾಜಿ ಮೊಹಮ್ಮದ್ ಇಕ್ಬಾಲ್ ಹಣಗಿ, ಜನಾಬ ಜಿಲಾನಿ ಉಮಚಗಿ, ಜನಾಬ ಸೈಯದ್ ಇಸ್ಮಾಯಿಲ್ ಬಿಜಾಪೂರ, ಜನಾಬ ಶಾಮಾಜ್ ಎಸ್. ಉಮಚಗಿ ಸೇರಿದಂತೆ ಎರಡೂ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು, ಎಲ್ಲ ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯರಾದ ಜನಾಬ ಎಲ್.ಆರ್. ಇಟಗಿ ಸ್ವಾಗತಿಸಿದರು. ನಫೀಸಾ ಕದಡಿ ನಿರೂಪಿಸಿದರು. ಮುಖ್ಯೋಪಾಧ್ಯಾಯರಾದ ಜನಾಬ ಎಂ.ಎ. ರಿಕಾರ್ಟಿ ವಂದಿಸಿದರು.



