ಮನೋರಮಾ ಕಾಲೇಜಿನಲ್ಲಿ ಪಾಲಕರ ಸಭೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಮನೋರಮಾ ಪದವಿಪೂರ್ವ ಕಾಲೇಜಿನಲ್ಲಿ ಪಾಲಕರ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯ ಅಧ್ಯಕ್ಷತೆಯನ್ನು ಪ್ರಾಚಾರ್ಯ ಬಿ.ಎಸ್. ಹಿರೇಮಠ ವಹಿಸಿ ಮಾತನಾಡಿ, ಎಲ್ಲ ಪಾಲಕರು ತಮ್ಮ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡಿ ಮಕ್ಕಳ ಚಲನವಲನಗಳ ಬಗ್ಗೆ ಗಮನ ಕೊಡಬೇಕು. ಮಕ್ಕಳಿಗೆ ಮೊಬೈಲ್ ಬಳಕೆ ಮಾಡಲು ಮಹಾವಿದ್ಯಾಲಯದಲ್ಲಿ ಅವಕಾಶವಿಲ್ಲ. ಕಾಲೇಜಿನ ನಿಯಮಾವಳಿಗಳನ್ನು ಮೀರುವಂತಿಲ್ಲ. ನಿಮ್ಮ ಮಕ್ಕಳ ಘಟಕ ಪರೀಕ್ಷೆಗಳ ಫಲಿತಾಂಶವನ್ನು ವಿಕ್ಷೀಸಿ ಮುಂದಿನ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಬರುವ ರೀತಿಯಲ್ಲಿ ಅಧ್ಯಯನ ಮಾಡಿಸಿ ಎಂದರು.

Advertisement

ಆಡಳಿತಾಧಿಕಾರಿ ಕಿಶೋರ ಮುದಗಲ್ಲ ಮಾತನಾಡಿ, ವಿದ್ಯಾರ್ಥಿಗಳು ಸಾಧನೆಯತ್ತ ಸಾಗಬೇಕಾದರೆ ಮುಂದೆ ಗುರಿ, ಹಿಂದೆ ಗುರು ಇರಬೇಕು ಎಂಬಂತೆ ತಮ್ಮೆಲ್ಲರಿಗೆ ಉಪನ್ಯಾಸಕರು ಹಾಗೂ ಪ್ರಾಚಾರ್ಯರು ತಮಗೆ ದಾರಿದೀಪವಾಗಿ ಕಾರ್ಯನಿರ್ವಹಿಸುವರು ಎಂದರು.

ಈ ಸಂದರ್ಭದಲ್ಲಿ ಸಂಯೋಜಕಿ ಪ್ರೊ. ಶಾಹೀದಾ ಶಿರಹಟ್ಟಿ ವಿದ್ಯಾರ್ಥಿಗಳ ಘಟಕ ಪರೀಕ್ಷೆಗಳ ಫಲಿತಾಂಶವನ್ನು ಪಾಲಕರಿಗೆ ವಿವರಿಸಿದರು. ಪ್ರೊ. ರಾಘವೆಂದ್ರ ನವಲಗುಂದ, ಪ್ರೊ. ಶ್ರೀಕಾಂತ ಐಲಿ, ಪ್ರೊ. ರಶ್ಮಿ ಹೂಗಾರ, ಪ್ರೊ. ಸುಜಾತಾ ಇಂಡಿ, ಪ್ರೊ. ಕೆ. ಜಾಧವ, ಪ್ರೊ. ಒ.ಒ. ಶಿರಹಟ್ಟಿ ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here