ಪ್ರೇಯಸಿ ಜೊತೆಗಿನ ಲಿವಿಂಗ್​ ಟುಗೆದರ್​ಗೆ​ ಪೋಷಕರ ವಿರೋಧ: ಯುವಕ ಸೂಸೈಡ್!

0
Spread the love

ಕಲಬುರ್ಗಿ:– ಕಲಬುರಗಿ ನಗರದ ನಾಗನಹಳ್ಳಿಯಲ್ಲಿ ರೈಲ್ವೇ ಹಳಿಗೆ ಹಾರಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ. ಮಹಿಳೆ ಜೊತೆ ಲಿವಿಂಗ್ ಟುಗೆದರ್‌ನಲ್ಲಿರಲು ಮನೆಯವರು ವಿರೋಧಿಸಿದ್ದಕ್ಕೆ ಯುವಕ ಈ ದುಡುಕು ನಿರ್ಧಾರ ಕೈಗೊಂಡಿದ್ದಾರೆ.

Advertisement

28 ವರ್ಷದ ಶಿವಕುಮಾರ್ ಮೃತ ಯುವಕ. ಆತ್ಮಹತ್ಯೆಗೂ ಮುನ್ನ ಲಿವಿಂಗ್ ಟುಗೆದರ್​ನಲ್ಲಿದ್ದ ಮಹಿಳೆಗೆ ಕರೆ ಮಾಡಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಮಹಿಳೆಯೂ ಸಹ ಶಿವಕುಮಾರ್ ರಕ್ಷಣೆ ಮಾಡಲು ಮುಂದಾಗಿದ್ದಾಳೆ. ಆದರೂ ಪ್ರಯೋಜನವಾಗಿಲ್ಲ. ಇನ್ನು ಶಿವಕುಮಾರ್​ನನ್ನು ರಕ್ಷಣೆ ಮಾಡುವ ವೇಳೆ ಬಿದ್ದಿದ್ದರಿಂದ ಮಹಿಳೆಗೆ ಗಾಯಗಳಾಗಿದ್ದು, ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಸಂಬಂಧ ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here