ಹುಬ್ಬಳ್ಳಿ: ಜಯಮೃತ್ಯುಂಜಯ ಸ್ವಾಮೀಜಿ ಆಸ್ಪತ್ರೆ ಸೇರಿರೋದು ಪ್ರಚಾರದ ಒಂದು ಭಾಗ ಎಂದು ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಆರೋಪಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,
ಸ್ವಾಮೀಜಿಗಳು ನನ್ನ ಮೇಲೆ ಗೂಬೆ ಕುರಿಸುವ ಕೆಲಸ ಮಾಡುತ್ತಿದ್ದಾರೆ. ಸ್ವಾಮೀಜಿಗಳು ಮಹಾನ್ ನಾಯಕರ ಪರವಾಗಿ ಬಿಜೆಪಿ ವೇದಿಕೆಯ ಮೇಲೆಯೇ ಕುಳಿತಿದ್ದಾರೆ. ಬಿಜೆಪಿಗೆ ಸ್ವಾಮೀಜಿಗಳು ಅಧಿಕೃತವಾಗಿ ಸೇರಿದ್ದಾರೆ. 2ಡಿ ಬೇಕಾ ಅಥವಾ 2ಎ ಬೇಕಾ ಎಂಬ ಸ್ಪಷ್ಟನೆ ನೀಡಬೇಕೆಂದು ಅವರೇ ಕೋರಿದ್ದಾರೆ ಎಂದು ವಿಜಯಾನಂದ ಆರೋಪ ಮಾಡಿದ್ದಾರೆ.
2ಬಿ ಮೀಸಲಾತಿ ಯಥಾ ರೀತಿ ಇರುತ್ತದೆ ಎಂದು ಬೊಮ್ಮಾಯಿ ಸರ್ಕಾರವು ಕೋರ್ಟ್ ಗೆ ಹಿಂಬರಹ ನೀಡಿತ್ತು. ಎಲ್ಲಾ ಲಿಂಗಾಯತ ಒಳ ಪಂಗಡಗಳಿಗೆ ಒಬಿಸಿ ಮೀಸಲಾತಿ ಕೊಡಬೇಕೆಂದು ಸಿದ್ದರಾಮಯ್ಯ ಅವರು ಕೇಂದ್ರಕ್ಕೆ ಶಿಫಾರಸ್ಸು ಮಾಡ್ಬೇಕು ಎಂದು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.