ಬೆಂಗಳೂರು: ಕ್ಯಾಬ್ ಓಡಿಸುತ್ತ ಮನೆಗಳ್ಳತನ ಮಾಡುತ್ತಿದ್ದ ಚಾಲಕನನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಚೆನೈ ಮೂಲದ ಸತೀಶ್ ಬಂಧಿತ ಆರೋಪಿ. ಚೆನೈ ಮೂಲದ ಸತೀಶ್ ಬೆಂಗಳೂರಿನ ಕಾವಲ್ ಬೈರಸಂದ್ರದಲ್ಲಿ ನೆಲಸಿದ್ದನು. ಈತ ಕ್ಯಾಬ್ ಚಾಲಕನಾಗಿದ್ದಾನೆ. ಕ್ಯಾಬ್ ಓಡಿಸುತ್ತ ಅಕ್ಕಪಕ್ಕದ ಮನೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದನು. ಮನೆಯಲ್ಲಿ ಯಾರು ಇಲ್ಲ ಅಂತ ಖಚೀತಪಡಿಸಿಕೊಂಡು ಕಳ್ಳತನ ಮಾಡುತ್ತಿದ್ದನು.
ಸತೀಶ್ ಇದೇ ವರ್ಷ ಏಪ್ರಿಲ್ 4 ರಂದು ಕಲ್ಯಾಣ ನಗರದ ಹೆಚ್.ಆರ್.ಬಿ.ಆರ್ ಲೇಔಟ್ಗೆ ಪಿಕಪ್ಗೆ ಹೋಗಿದ್ದನು. ಪಿಕಪ್ ಮಾಡಿಕೊಂಡು ಹೊರಡುವಾಗ ಹೆಚ್ಆರ್ಬಿಆರ್ ಲೇಔಟ್ನ ಪ್ರಮೋದ್ ಭಟ್ ಎಂಬುವರ ಮನೆಯನ್ನು ಟಾರ್ಗೆಟ್ ಮಾಡಿದ್ದಾನೆ. ಬಳಿಕ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಹೋಗಿ ಕಳ್ಳತನ ಮಾಡಿ ಪರಾರಿಯಾಗಿದ್ದಾನೆ. ಬಳಿಕ ಕಳ್ಳತನಕ್ಕೆ ಬಳಸಿದ್ದ ಬೈಕ್ ಅನ್ನು ಸೆಕೆಂಡ್ ಹ್ಯಾಂಡ್ ಶೂರೂಂನಲ್ಲಿ ಮಾರಿದ್ದನು.
ಮನೆ ಮಾಲೀಕ ಪ್ರಮೋದ್ ಭಟ್ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಪರಿಶೀಲನೆ ನಡೆಸಿದಾಗ ಸತೀಶ್ ಬ್ಲ್ಯಾಕ್ ಕಲರ್ ಪಲ್ಸರ್ನಲ್ಲಿ ಬಂದು ಕಳ್ಳತನ ಮಾಡಿರುವುದು ಪತ್ತೆಯಾಗಿದೆ. ನಂತರ ಪೊಲೀಸರು, ಆರ್ಟಿಒ ಸಹಾಯದೊಂದಿಗೆ ಬೈಕ್ ಪತ್ತೆ ಹಚ್ಚಿದ್ದಾರೆ.
ಆದರೆ, ಅಷ್ಟೊತ್ತಿಗಾಗಲೆ ಬೈಕ್ ಅನ್ನು ಬೇರೊಬ್ಬರು ಖರೀದಿಸಿ ತಮ್ಮ ಹೆಸರಿಗೆ ಮಾಡಿಕೊಂಡಿದ್ದರು. ಕೊನೆಗೆ ಪೊಲೀಸರು ಸತೀಶ್ ವಿವರ ಶೂರೂಮ್‌ನಲ್ಲಿ ಪಡೆದರು. ಆಗ ಸತೀಶ್ ತಮಿಳುನಾಡನಲ್ಲಿರುವುದು ಪತ್ತೆಯಾಗಿದೆ. ತಮಿಳುನಾಡಿಗೆ ಹೋಗಿ ಆರೋಪಿ ಸತೀಶ್ನನ್ನು ಬಂಧಿಸಿ ಪೊಲೀಸರು ಕರೆ ತಂದಿದ್ದಾರೆ. ಆರೋಪಿಯಿಂದ 90 ಗ್ರಾಂ ಚಿನ್ನ ಹಾಗೂ ಒಂದು ಲ್ಯಾಪ್ ಟಾಪ್ ಜಪ್ತಿ ಮಾಡಲಾಗಿದೆ.