ವಿಜಯಸಾಕ್ಷಿ ಸುದ್ದಿ, ಗದಗ: ಗದುಗಿನ ಮಲ್ಲಿಕಾರ್ಜುನ ಯಲ್ಲಪ್ಪ ಭೂಫಾನಿರವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ನಡೆಸಿದ ಬಿಸಿಸಿಐ ಹೈಬ್ರಿಡ್ ಲೆವೆಲ್ 1 ಕೋಚ್ ಕೋರ್ಸ್ (ಸೆಂಟರ್ ಆಫ್ ಎಕ್ಸಲೆನ್ಸ್)ನಲ್ಲಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ.
Advertisement
ಕಾರ್ಯಾಗಾರವು 2024ರ ಡಿಸೆಂಬರ್ 12ರಿಂದ 14ರವರೆಗೆ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ (ಎನ್.ಸಿ.ಎ)ಯಲ್ಲಿ ನಡೆಯಿತು. ಕ್ರಿಕೆಟ್ ಕೋಚ್ ಮಲ್ಲಿಕಾರ್ಜುನ್ ಭೂಪಾನಿಯವರು ಮಾರ್ಚ್ 31ರಿಂದ ಗದುಗಿನಲ್ಲಿ ಬೇಸಿಗೆ ಶಿಬಿರವನ್ನು ನಡೆಸಲಿದ್ದು, ಆಸಕ್ತ ಆಟಗಾರರು ಅವರ ಕೋಚಿಂಗ್ ಅಕಾಡೆಮಿಗೆ ಸೇರಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ-9886466390, 9739708183, 8904153664 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.


