ವಿಜಯಸಾಕ್ಷಿ ಸುದ್ದಿ, ಗದಗ: ಇತ್ತೀಚೆಗೆ ಗೊಜರಿಯೋ ಕರಾಟೆ ಡು ಕೆನರಿಯುಕಾನ್ ಇಂಡಿಯಾ ಇದರ ಸಂಯುಕ್ತ ಆಶ್ರಯದಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಕರಾಟೆ ಬ್ಲ್ಯಾಕ್ ಬೆಲ್ಟ್ ಪರೀಕ್ಷೆಯಲ್ಲಿ ಗದುಗಿನ ರಾಯಲ್ ಯುಥ್ ಮಾರ್ಷಲ್ ಆರ್ಟ್ ಅಸೋಸಿಯೇಶನ್ ವಿದ್ಯಾರ್ಥಿಗಳಾದ ಪೃಥ್ವಿ ಕೆ.ಪಡಗದ, ಮಲ್ಲಿಕರಿಹಾನ್ ಸಿ.ಸಿಂಧನೂರ, ಸಂಪ್ರೀತಿ ಟಿ.ಹೂಗಾರ, ಸಾಹಿಲ್ ಡಿ.ವೆರ್ಣೇಕರ ಭಾಗವಹಿಸಿ, ಬ್ಲ್ಯಾಕ್ ಬೆಲ್ಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಗದುಗಿನ ಮುಖ್ಯ ಕರಾಟೆ ತರಬೇತುದಾರ ಪರಶುರಾಮ ಎಸ್.ಹಬೀಬ ಮತ್ತು ಗೊಜರಿಯೋ ಕರಾಟೆ ಡು ಕೆನರಿಯುಕಾನ್ ಇಂಡಿಯಾ ಮತ್ತು ಅದರ ಸ್ಪೂರ್ತಿ ಮೂಲವಾದ ಟೆಕ್ನಿಕಲ್ ನಿರ್ದೇಶಕರಾದ ಅಣ್ಣಪ್ಪ ಮಾರ್ಕಲ್ ಅವರ ಮಾರ್ಗದರ್ಶನದಿಂದ ವಿದ್ಯಾರ್ಥಿಗಳು ಈ ಸಾಧನೆ ಮಾಡಿದ್ದಾರೆ.
ತಮ್ಮ ಮಕ್ಕಳಿಗಾಗಿ ಸದಾ ಬೆಂಬಲವಾಗಿ ನಿಂತಿರುವ ಎಲ್ಲ ಪೋಷಕರಿಗೆ ರಾಯಲ್ ಯುಥ್ ಮಾರ್ಷಲ್ ಆರ್ಟ್ ಅಸೋಸಿಯೇಶನ್ ಮುಖ್ಯ ತರಬೇತುದಾರ ಮೆಹಬೂಬ ದೊಡ್ಡಮನಿಯವರು ಅಭಿನಂದಿಸಿದ್ದಾರೆ.