ವಿಜಯಸಾಕ್ಷಿ ಸುದ್ದಿ, ಗದಗ: 9 ವರ್ಷಗಳ ಕಾಲ ಚಾರ್ಟೆಡ್ ಅಕೌಂಟೆಂಟ್ ಪರೀಕ್ಷೆಯ ತಯಾರಿ ನಡೆಸಿದ ಬಳ್ಳಾರಿಯ ಸಿರಗುಪ್ಪ ಮೂಲದ ಮಲ್ಲಿಕಾರ್ಜುನ್ ಹೂಗಾರ್ ಮೇ 2025ರಲ್ಲಿ ನಡೆಸಿದ ಸಿಎ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ.
ಗದುಗಿನ ಕೆವಿಎಸ್ಆರ್ ಮಹಾವಿದ್ಯಾಲಯದಲ್ಲಿ ವಾಣಿಜ್ಯ ವಿಭಾಗದಲ್ಲಿ ಪದವಿಪೂರ್ವ ಶಿಕ್ಷಣ, ಜ. ತೋಂಟದಾರ್ಯ ಮಹಾವಿದ್ಯಾಲಯದಲ್ಲಿ ಬಿಕಾಂ ಪದವಿ, 2016ರಲ್ಲಿ ಚಾರ್ಟೆಡ್ ಅಕೌಂಟೆಂಟ್ ಪದವಿಗೆ ಪ್ರವೇಶ ಪಡೆದು 3 ವರ್ಷಗಳ ವೃತ್ತಿಪರ ತರಬೇತಿಯನ್ನು ಎ. ರಾಘವೇಂದ್ರ ರಾವ್ ಅಂಡ್ ಅಸೋಸಿಯೇಟ್ಸ್, ಲೆಕ್ಕ ಪರಿಶೋಧನಾ ಸಂಸ್ಥೆಯ ಪ್ರಾಂಶುಪಾಲರಾದ ಆನಂದ್ ಎಲ್.ಪೋತ್ನಿಸ್ ಇವರಲ್ಲಿ ವೃತ್ತಿಪರ ತರಬೇತಿಯನ್ನು ಪಡೆದಿದ್ದಾರೆ.
ನನ್ನ ಯಶಸ್ವಿಗೆ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳಾದ ಡಾ.ಕಲ್ಲಯ್ಯಜ್ಜನವರ ಪ್ರೋತ್ಸಾಹ ಹಾಗೂ ಆಶ್ರಮದ ಸರ್ವರೂ ಕಾರಣವಾಗಿದ್ದು, ಅವರೆಲ್ಲರಿಗೂ ಮಲ್ಲಿಕಾರ್ಜುನ ಕೃತಜ್ಞತೆ ಸಲ್ಲಿಸಿದ್ದಾರೆ.



