ಗದಗ: ಬಸ್ ಸ್ಟಾಪ್ ನಲ್ಲಿ ಬಸ್ ನಿಲ್ಲಿಸದ ಹಿನ್ನೆಲೆಯಲ್ಲಿ ಬಸ್’ಗಳನ್ನ ತಡೆದು ಪ್ರಯಾಣಿಕರ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಗದಗ ನಗರದ ಮಹಾತ್ಮಾ ಗಾಂಧಿ ವೃತ್ತದ ಬಳಿ ಬಸ್ ಸ್ಟಾಪ್ ನಲ್ಲಿ ನಡೆದಿದೆ. ಬಸ್ ಸ್ಟಾಪ್ ನಲ್ಲಿ ಪ್ರಯಾಣಿಕರಿದ್ದರೂ ಬಸ್ ನಿಲ್ಲಿಸದೇ ಚಾಲಕರು ತೆರಳುತ್ತಿದ್ದರು.
Advertisement
ಇದರಿಂದಾಗಿ ಬೇರೆ ಊರುಗಳಿಗೆ ಹೋಗೋ ಪ್ರಯಾಣಿಕರು ಹೈರಾಣಾಗಿದ್ದು, ಬಸ್ ಏಕೆ ನಿಲ್ಲಿಸೋದಿಲ್ಲ ಅಂತಾ ಚಾಲಕನೊಂದಿಗೆ ಪ್ರಯಾಣಿಕರು ವಾಗ್ವಾದ ನಡೆಸಿದರು. ಬಸ್ ನಿಲ್ಲಿಸದಿದ್ರೆ ಯಾವ ಬಸ್ ಗಳನ್ನೂ ಮುಂದೇ ಹೋಗಲು ಬಿಡೋದಿಲ್ಲ ಎಂದ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ದೀಪಾವಳಿ ಹಬ್ಬ ಬರ್ತಾ ಇರೋದರಿಂದ ನಗರಕ್ಕೆ ಹೆಚ್ಚು ಜನ ಬರ್ತಾರೆ ಹೆಚ್ಚುವರಿ ಬಸ್ ಬಿಡಿ ಅಂತಾ ಆಗ್ರಹಿಸಿದರು. ಈ ಘಟನೆಯಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು, ಬಳಿಕ ಪೊಲೀಸರು ಹಾಗೂ ಸಾರಿಗೆ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.