ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಮುನಸಿಪಲ್ ಮೈದಾನದ ಪತಂಜಲಿ ಯೋಗ ಸಮಿತಿಯ ನಿರಂತರ ಕಕ್ಷೆಯಿಂದ ಕಳೆದ ತಿಂಗಳು ಹಮ್ಮಿಕೊಂಡ ಕಾಶಿ-ಅಯೋಧ್ಯ ಯಾತ್ರೆಯನ್ನು ದೊಡ್ಮನಿ ದಂಪತಿಗಳು ಅಚ್ಚುಕಟ್ಟಾಗಿ ಮಾಡಿಸಿದ್ದಕ್ಕಾಗಿ ಅವರಿಗೆ ಪತಂಜಲಿ ಯೋಗ ಸಮಿತಿಯ 5 ಸಂಘಟನೆಗಳ ಪರವಾಗಿ ಅಭಿನಂದನಾ ಸಮಾರಂಭವನ್ನು ಮುನಸಿಪಲ್ ಮೈದಾನದಲ್ಲಿ ಏರ್ಪಡಿಸಲಾಗಿತ್ತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ದೊಡ್ಡಮನಿ, ತಾವೆಲ್ಲರೂ ಸಹಕರಿಸಿದ್ದಕ್ಕಾಗಿ ಈ ಪ್ರವಾಸ ಯಶಸ್ವಿಯಾಯಿತು. ವಿದ್ಯಾಭ್ಯಾಸ ಮಾಡಿದ ಶಾಲೆಯಲ್ಲಿಯೇ ಸನ್ಮಾನ ಆಗುತ್ತಿರುವುದು ಮರೆಯಲಾರದ ನೆನಪು ಎಂದರು.
ಪ್ರವಾಸದ ನೇತೃತ್ವವನ್ನು ಜಿಲ್ಲಾ ಖಜಾಂಚಿ ಕಂಠೆಪ್ಪ ಗುಗ್ಗರಿ, ಜಿಲ್ಲಾ ಪ್ರಭಾರಿ ಗಿರಿಯಪ್ಪ ಮಡಿವಾಳರ ಹಾಗೂ ಮಹಿಳಾ ಪ್ರಭಾರಿ ಶೋಭಾ ಗುಗ್ಗರಿ ವಹಿಸಿದ್ದರು. ಈ ಸಂದರ್ಭದಲ್ಲಿ ಕಂಠೆಪ್ಪ ಗುಗ್ಗರಿ, ಗಿರಿಯಪ್ಪ ಮಡಿವಾಳರ, ಶೋಭಾ ಗುಗ್ಗರಿ, ಶ್ರೀ ನಾರಾಯಣಪೂರ, ಬಸಣ್ಣ ಎಚ್ಚಲಗಾರ, ಬಸವರಾಜ ಹಿರೇಮಠ ಮುಂತಾದವರು ಪ್ರವಾಸದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊAಡರು. ನಾಗರತ್ನಾ ಬಡಿಗಣ್ಣವರ ನಿರೂಪಿಸಿದರು. ಶೋಭಾ ಗುಗ್ಗರಿ ವಂದಿಸಿದರು.