ಅಚ್ಚ ಕನ್ನಡದ ಧ್ವನಿ ಅಪರ್ಣಾ ಇನ್ನಿಲ್ಲ: ಕವನದ ಮೂಲಕ ದುಃಖ ತೋಡಿಕೊಂಡ ಪತಿ ನಾಗರಾಜ್!

0
Spread the love

ಸಾಮಾಜಿಕ ಜಾಲತಾಣದಲ್ಲಿ ಅಪರ್ಣಾ ಅವರಿಗೆ ಕವನದ ಮೂಲಕ ಪತಿ ನಾಗರಾಜ್ ವಸ್ತಾರೆ ದುಃಖ ತೋಡಿಕೊಂಡಿದ್ದಾರೆ.

Advertisement

ಪೋಸ್ಟ್ ನಲ್ಲಿ ಏನಿದೆ?

ಬೆಳಗಿಕೊಂಡಿರೆಂದು
ಕಿಡಿ ತಾಕಿಸಿ ಹೊರಟಿತು
ಹೆಣ್ಣು
ಚಿತ್ತು ತೆಗೆದು
ಬತ್ತಿಯ ನೆತ್ತಿ ಚೆನ್ನಾಗಿಸಿ
ತಿರುಪಿ ತಿದ್ದಿ
ಇರು
ತುಸುವಿರೆಂದು ಕರೆದರೂ
ನಿಲ್ಲದೆಯೇ
ಬೇರಾವುದೋ ಕರೆಗೆ
ತಣ್ಣಗೆ ಓಗೊಟ್ಟ ಮೇರೆ
ಯಲ್ಲಿ
ಒಂದೇ ಒಂದು
ನಿಮಿಷ
ಬಂದೇನೆಂದು ಕಡೆಗಳಿಗೆ
ಯ ಸೆರಗಿನ ಬೆನ್ನಿನಲ್ಲಿ
ಅಂದು.
ಕಾದಿದ್ದೇನೆ
ಈಗ ಬಂದಾಳೆಂದು
ಆಗ ಬಂದಾಳೆಂದು
ಮರಳಿ
ಜೀವ ತಂದಾಳೆಂದು
ಇದು
ಮೂರನೇ ದಿವಸ
ಇಷ್ಟಾಗಿ
ಬೆಳಗಲಿಟ್ಟ ಕಿರಿಸೊಡರ
ಬೆಳಕು ನಾನು
ಉರಿವುದಷ್ಟೇ ಕೆಲಸ
ಇರುವ ತನಕ.


Spread the love

LEAVE A REPLY

Please enter your comment!
Please enter your name here