ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅವರ ತಾಯಿ ಹೀರಾಬೆನ್ ಕುರಿತು ನಿಂದನಾತ್ಮಕ ಎಐ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ʼಗೆ ತೀವ್ರ ಮುಖಭಂಗವಾಗಿದೆ.
Advertisement
ಮೋದಿಯವರ ದಿವಂಗತ ತಾಯಿ ಹೀರಾಬೆನ್ ಮೋದಿ ಅವರ ಕುರಿತಾದ ಎಐ ಆಧಾರಿತ ವೀಡಿಯೊವನ್ನು ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ತೆಗೆದುಹಾಕುವಂತೆ ಪಾಟ್ನಾ ಹೈಕೋರ್ಟ್ ಕಾಂಗ್ರೆಸ್‌ಗೆ ಸೂಚಿಸಿದೆ.
ಬಿಹಾರ ಕಾಂಗ್ರೆಸ್ ಪೋಸ್ಟ್ ಮಾಡಿದ ಕೃತಕ ಬುದ್ಧಿಮತ್ತೆ ಆಧಾರಿತ ವೀಡಿಯೊ ಭಾರೀ ರಾಜಕೀಯ ವಿವಾದಕ್ಕೆ ಕಾರಣವಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಕಾಂಗ್ರೆಸ್‌ಗೆ ಸೂಚನೆ ನೀಡಿದೆ.
ವಿರೋಧ ಪಕ್ಷವು ಪ್ರಧಾನಿಯವರ ದಿವಂಗತ ತಾಯಿಗೆ ಅಗೌರವ ತೋರಿದೆ ಎಂದು ಬಿಜೆಪಿ ಆರೋಪಿಸಿತ್ತು. ವೀಡಿಯೊದಲ್ಲಿ ಎಲ್ಲಿಯೂ ಹೀರಾಬೆನ್ ಮೋದಿಗೆ ಅಗೌರವ ತೋರಿಲ್ಲ ಎಂದು ಕಾಂಗ್ರೆಸ್ ಸಮರ್ಥಿಸಿಕೊಂಡಿತ್ತು.


