ಕ್ರಿಕೆಟ್ ಆಟದಿಂದ ದೇಶ ಪ್ರೇಮ, ದೇಶ ಭಕ್ತಿ ಅಳೆಯಲು ಸಾಧ್ಯವಿಲ್ಲ: ಬಿಕೆ ಹರಿಪ್ರಸಾದ್

0
Spread the love

ಬೆಂಗಳೂರು: ಕ್ರಿಕೆಟ್ ಆಟದಿಂದ ದೇಶ ಪ್ರೇಮ, ದೇಶ ಭಕ್ತಿ ಅಳೆಯಲು ಸಾಧ್ಯವಿಲ್ಲ ಎಂದು ಬಿಕೆ ಹರಿಪ್ರಸಾದ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕ್ರಿಕೆಟ್ ಆಟದಿಂದ ದೇಶ ಪ್ರೇಮ, ದೇಶ ಭಕ್ತಿ ಅಳಿಯಲು ಸಾಧ್ಯ ಇಲ್ಲ. ಕ್ರಿಕೆಟ್ ಆಟ ನೋಡಿ ಅದು ದೇಶಭಕ್ತಿ, ದೇಶ ಪ್ರೇಮ ಅಂದ್ರೆ ಅದು ಹುಂಬುತನವಾದೀತು.

Advertisement

ಪೆಹಲ್ಗಾವ್ ಘಟನೆ ಜನರ ಮನಸ್ಸಿನಿಂದ ಇನ್ನೂ ಮಾಸಿಲ್ಲ. ಪಾಕ್ ಉಗ್ರರ ಹೇಯಕೃತ್ಯದ ರಕ್ತ ಇನ್ನು ಇದೆ. ಇಂಥ ಹೊತ್ತಲ್ಲಿ ಇವರು ಹೋಗಿ ಪಾಕ್ ಜೊತೆ ಕ್ರಿಕೆಟ್ ಆಡುವುದಾ? ಇವರು ನಿಜವಾದ ದೇಶಪ್ರೇಮಿಗಳಾಗಿದ್ರೆ ಅವರ ಜೊತೆ ಕ್ರಿಕೆಟ್ ಆಡಬಾರದಿತ್ತು ಎಂದರು.

ಇನ್ನೂ ಹಿಂದೆ ಕಾರ್ಗಿಲ್ ಯುದ್ದ ಆದ ಬಳಿಕ ಆಗಿನ ಬಿಜೆಪಿ ನಾಯಕರ ಸಂಬಂಧಿಕರು ಪಾಕ್ ಜೊತೆ ವ್ಯವಹಾರ ಇಟ್ಟುಕೊಂಡಿದ್ರು. ಈಗ ಗಡಿಪಾರು ಆಗಿರುವ ಅಮಿತ್ ಶಾ ಪುತ್ರನ ವ್ಯಾಪಾರ ಮಾಡಲು ಪಾಕ್ ಜೊತೆ ಕ್ರಿಕೆಟ್ ಆಡೋದು.ಏಕೆಂದ್ರೆ ಪಾಕ್ ಜೊತೆ ಆಡವಾಡಿದ್ರೆ ದುಡ್ಡು ಜಾಸ್ತಿ ಬರುತ್ತೆ ಅಂತ ಇದರಿಂದ ಸಾವಿರಾರು ಕೋಟಿ ವ್ಯವಹಾರ ಆಗುತ್ತೆ ಅನ್ನೋ ಲೆಕ್ಕಾಚಾರದಲ್ಲಿ ಆಡಿಸಿರೋದು ಎಂದರು.


Spread the love

LEAVE A REPLY

Please enter your comment!
Please enter your name here