ಜಗಳೂರು : ಪಟ್ಟಣದ ಯುವ ಕವಯತ್ರಿ ಪವಿತ್ರ ಬಡಿಗೇರ್ ಅವರು ರಾಜ್ಯಮಟ್ಟದ “ ಕವಿ ವಿಭೂಷಣ ಪ್ರಶಸ್ತಿ” ಗೆ ಆಯ್ಕೆಯಾಗಿದ್ದಾರೆ. ಇದೇ ಜುಲೈ 27 ರಂದು ನಡೆಯುವ ಕವಿತ ಕರ್ಮಣಿ ಫೌಂಡೇಶನ್ ನಾಗರ ಮುನ್ನೋಳಿ ಉದ್ಘಾಟನಾ ಸಮಾರಂಭದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಯುವ ಕವಯಿತ್ರಿ ಪವಿತ್ರ ಬಡಿಗೇರ್ ಅವರಿಗೆ ಈ ರಾಜ್ಯಮಟ್ಟದ ಕವಿ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಚಿಕ್ಕೋಡಿ ನಾಗರ ಮುನ್ನೋಳಿ ಕವಿತ್ತ ಕರ್ಮಮಣಿ ಫೌಂಡೇಶನ್(ರಿ) ಅಧ್ಯಕ್ಷ ಲಾಲ್‌ಸಾಬ್ ಎಚ್ ಪೆಂಡಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪರಿಚಯ
ಪವಿತ್ರ ಬಡಿಗೇರ್ ಅವರ ಹುಟ್ಟೂರು ಹರಪನಹಳ್ಳಿ ತಾಲೂಕಿನ ಕಡಬಗೆರೆ. ಚಿಕ್ಕವರಿದ್ದಾಗಿನಿಂದಲೂ ಕಲೆ ಮತ್ತು ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದರು, ವೈವಾಹಿಕ ಜೀವನದ ನಂತರ ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ವಾಸವಾಗಿರುವ ಇವರು ಕಳೆದ ಐದಾರು ವರ್ಷಗಳಿಂದ ವಿದ್ಯಾಭ್ಯಾಸದ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿ ಅನೇಕ ಕವನಗಳನ್ನು ಹಾಗೂ ಅಧುನಿಕ ವಚನಗಳನ್ನು, ಗಜಲ್ ಗಳನ್ನು ರಚಿಸಿದ್ದಾರೆ.
ಈಗಾಗಲೇ ಪವಿತ್ರ ಬಡಿಗೇರ್ ಅವರಿಗೆ 2021 ರಲ್ಲಿ ನವಜ್ಯೋತಿ ಸಾಂಸ್ಕೃತಿಕ ಸೇವಾ ಸಂಸ್ಥೆಯು ವಿಶ್ವ ಮಹಿಳಾ ದಿನಾಚರಣೆಯಂದು ಆಯೋಜಿಸಿದ್ದ ವಿಜಯ ನಗರ ಜಿಲ್ಲೆಯ ಪ್ರಥಮ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದಕ್ಕಾಗಿ ಇವರಿಗೆ ” ಕಾವ್ಯ ಜ್ಯೋತಿ ” ಎಂಬ ಬಿರುದು ನೀಡಿ ಸನ್ಮಾನಿಸಿದ್ದಾರೆ.
ಸಿದ್ದೇಶ್ವರ ಸಾಹಿತ್ಯ ವೇದಿಕೆಯು ಚಿತ್ರದುರ್ಗ , ಕಲಾಕುಂಚ* ಸಂಸ್ಥೆಯಿಂದ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಕವಿಗೋಷ್ಠಿ, ವಿಶ್ವ ಬಂಜಾರ ಕಲಾ ಸಾಹಿತ್ಯಿಕ ಸಂಘ ಅಮೀನಗಡ ಇತ್ಯಾದಿ ವೇದಿಕೆಗಳಲ್ಲಿ ಆಯೋಜಿಸಿದ್ದ ಅಂತರ್ಜಾಲ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.