ಬೆಂಗಳೂರು: ರೇಣುಕಾಸ್ವಾಮಿ ಕೇಸ್‌ನಲ್ಲಿ ನಡೆದ ಕ್ರೌರ್ಯಕ್ಕೆ ಮತ್ತಷ್ಟು ಫೋಟೋಗಳು ಸಾಕ್ಷಿಯಾಗಿವೆ. ಒಂದೊಂದು ಫೋಟೋಗಳು ಬೇರೆ ಬೇರೆಯ ಕಥೆಗಳನ್ನೇ ಹೇಳುತ್ತಿವೆ. ಒಂದು ಫೋಟೋದಲ್ಲಿ ರೇಣುಕಾಸ್ವಾಮಿ ಶರ್ಟ್ ಬಿಚ್ಚಿಸಿ ಹಿಂಸೆ ಕೊಟ್ಟಿದ್ದಾರೆ. ಇದರ ಬೆನ್ನಲ್ಲೇ ಪೊಲೀಸ್ ಕಸ್ಟಡಿಯಲ್ಲಿದ್ದ ಪವಿತ್ರಾ ಗೌಡಕಣ್ಣೀರು ಹಾಕ್ತಿರುವ ಫೋಟೋ ಸದ್ಯ ರಿವೀಲ್ ಆಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ಪೊಲೀಸರು ಸಲ್ಲಿಸಿರುವ ಚಾರ್ಜ್‌ಶೀಟ್‌ನಿಂದ ಒಂದೊಂದಾಗಿ ವಿಷಯಗಳು ಹೊರಬರುತ್ತಿವೆ. ಪಟ್ಟಣಗೆರೆ ಶೆಡ್‌ನಲ್ಲಿ ನಡೆದ ಹತ್ಯೆಯ ಕುರಿತಾದ ಹಲವು ಫೋಟೋಗಳು ಇತ್ತೀಚಿಗಷ್ಟೇ ಲಭ್ಯವಾಗಿದ್ದವು.
ಕೊಲೆ ಪ್ರಕರಣದಲ್ಲಿ ಭಾಗಿಯಾದ ಹಲವರ ಫೋನ್ ರಿಟ್ರೀವ್ ಮಾಡಿದ ಬಳಿಕ ಒಂದೊಂದಾಗಿ ಫೋಟೋಗಳು ಲಭ್ಯವಾಗುತ್ತಲೇ ಇವೆ. ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಜೀವ ಭಿಕ್ಷೆ ಬೇಡಿದ ಫೋಟೋ, ಸಾವನ್ನಪ್ಪಿದ ಬಳಿಕ ಮೃತದೇಹ ಬಿಸಾಕಿದ್ದ ಫೋಟೋ, ಸ್ಥಳ ಮಹಜರು ಸಮಯದಲ್ಲಿ ಆರೋಪಿ ದರ್ಶನ್ ಇದ್ದ ಫೋಟೋ, ಹತ್ಯೆಗಾಗಿ ಬಳಸಿದ ಉಪಕರಣಗಳ ಫೋಟೋ ಹೀಗೆ ಹಲವಾರು ಫೋಟೋಗಳು ಹೊರಬಂದಿವೆ.



