Homesocial avarenessನರೇಗಲ್ ಠಾಣೆಯಲ್ಲಿ ಶಾಂತಿ ಸಭೆ

ನರೇಗಲ್ ಠಾಣೆಯಲ್ಲಿ ಶಾಂತಿ ಸಭೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ : ಮುಂಬರುವ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ ರವಿವಾರ ನರೇಗಲ್ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ಜರುಗಿತು. ಸಭೆಯ ನೇತೃತ್ವ ವಹಿಸಿದ್ದ ಠಾಣಾ ಪಿಎಸ್‌ಐ ಐಶ್ವರ್ಯ ನಾಗರಾಳ ಮಾತನಾಡಿ, ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದಂತೆ ಪಟ್ಟಣದಲ್ಲಿ ಹಬ್ಬಗಳನ್ನು ಶಾಂತಿ-ಸುವ್ಯವಸ್ಥೆಯಿಂದ ಆಚರಿಸಬೇಕು ಎಂದು ಹೇಳಿದರು.

ಗಣೇಶ ಮೂರ್ತಿ ಪ್ರತಿಷ್ಠಾಪಿಸುವಾಗ ಪಟ್ಟಣ ಪಂಚಾಯಿತಿ ಹಾಗೂ ಪೊಲೀಸ್ ಠಾಣೆಯ ಅನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಧ್ವನಿ ವರ್ಧಕ ಬಳಕೆಗೆ ಪೊಲೀಸರಿಂದ ಮತ್ತು ವಿದ್ಯುತ್ ದೀಪ ಬಳಸಲು ಕಡ್ಡಾಯವಾಗಿ ಹೆಸ್ಕಾಂನಿಂದ ಅನುಮತಿ ಪಡೆದುಕೊಳ್ಳಬೇಕು. ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಹಾಗೂ ವಿಸರ್ಜನೆಯ ವೇಳೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮಂಡಳಿಯವರು ಗಮನ ಹರಿಸಬೇಕು. ಗಣಪತಿ ಮೂರ್ತಿಯನ್ನು ಕಾಯಲು ಸಮಿತಿ ಸದಸ್ಯರನ್ನು ನೇಮಿಸಿ ಮುಂಜಾಗ್ರತೆ ವಹಿಸಬೇಕು ಎಂದರಲ್ಲದೆ, ಈ ಕುರಿತು ಗಣೇಶ ಮೂರ್ತಿಗಳ ಸಂಘಟಕರಿಗೆ ಕೆಲ ಸೂಚನೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಎಂ.ಎಸ್. ಧಡೇಸೂರಮಠ, ಎ.ಎ. ನವಲಗುಂದ, ಎಚ್.ಎಚ್. ಅಬ್ಬಿಗೇರಿ, ಎನ್.ವಿ. ಲಕ್ಕನಗೌಡ್ರ, ಕೆ.ಎಚ್. ಅತ್ತಾರ, ಖಾದರಬಾಷಾ ಹೂಲಗೇರಿ, ದಾದಾಸಾಬ್ ನದಾಫ್, ರಾಮಪ್ಪ ಹಾಲಕೇರಿ, ಮಹೇಶ ಶಿವಶಿಂಪರ, ವೀರೇಶ ಮಣ್ಣೊಡ್ಡರ ಸೇರಿದಂತೆ ಇತರರು ಇದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!