ಸಹಬಾಳ್ವೆಯ ಪರಂಪರೆ ಮುಂದುವರೆಯಲಿ : ಪಿಎಸ್‌ಐ ಈರಪ್ಪ ರಿತ್ತಿ

0
Peace meeting called on the occasion of Bakrid festival
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಯಾವುದೇ ಸಮುದಾಯವಾಗಿರಲಿ, ಹಬ್ಬಳ ಆಚರಣೆ ವೇಳೆ ಅನ್ಯ ಧರ್ಮದ ಬಗ್ಗೆ ತಾತ್ಸಾರ ಮಾಡದೆ ಶಾಂತಿಯುತವಾಗಿ ಹಬ್ಬ ಆಚರಣೆ ಮಾಡಿದಾಗ ಮಾತ್ರ ಸೌಹಾರ್ದತೆ ಮೂಡಲು ಸಾಧ್ಯವಾಗುತ್ತದೆ. ಪಟ್ಟಣವು ಸದಾ ಎಲ್ಲ ಧರ್ಮದವರು ಸಹಬಾಳ್ವೆಯಿಂದ ನಡೆದುಕೊಂಡು ಬರುತ್ತಿದ್ದು, ಅದೇ ಪರಂಪರೆ ಎಲ್ಲ ಹಬ್ಬಗಳಲ್ಲಿ ಇರಲಿ ಎಂದು ಪಿಎಸ್‌ಐ ಈರಪ್ಪ ರಿತ್ತಿ ಹೇಳಿದರು.

Advertisement

ಅವರು ಬಕ್ರೀದ್ ಹಬ್ಬದ ಪ್ರಯುಕ್ತ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗುರುವಾರ ಸಂಜೆ ಕರೆಯಲಾಗಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು.

ಹಬ್ಬಗಳ ಮಹತ್ವವನ್ನು ತಿಳಿಸಿಕೊಡುವ ಜೊತೆಗೆ ಶಾಂತಿಗೆ ಯಾವುದೇ ರೀತಿಯ ಭಂಗವಾಗದಂತೆ ನಿಗಾ ವಹಿಸುವದು ಎಲ್ಲ ಧರ್ಮಗಳ ಮುಖಂಡರ ಕಾಳಜಿಯಾಗಿರಲಿ. ಶಾಂತಿಗೆ ಭಂಗ ತರುವ ಯಾವುದೇ ಹೇಳಿಕೆಗಳು, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುವದನ್ನು ಮಾಡಬಾರದು. ಎಲ್ಲರೂ ಕಾನೂನಿಗೆ ಬದ್ಧರಾಗಿ ನಡೆದುಕೊಳ್ಳಿ, ಕಾನೂನು ಮೀರಿದ ಯಾವುದೇ ವ್ಯಕ್ತಿ ಇರಲಿ ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇವೆ. ಅದರಂತೆ ಬಕ್ರೀದ ಹಬ್ಬವನ್ನು ಶಾಂತಿಯುತವಾಗಿ ಆಚರಿಸಿ ಎಂದು ಹೇಳಿದರು.

ಸಭೆಯಲ್ಲಿ ಅಪರಾಧ ವಿಭಾಗದ ಪಿಎಸ್‌ಐ ಚನ್ನಬಸಪ್ಪ ಬಬಲಿ, ದೂದ ನಾನಾ ದರ್ಗಾ ಕಮಿಟಿ ಅಧ್ಯಕ್ಷ ಸುಲೇಮಾನಸಾಬ್ ಕಣಕೆ, ಅಂಜುಮನ್ ಸಂಸ್ಥೆಯ ಅಧ್ಯಕ್ಷ ಮುಕ್ತಾರಅಹ್ಮದ ಗದಗ, ಪೂರ್ಣಜಿ ಕರಾಟೆ, ಅನಿಲ ಮುಳಗುಂದ, ನಜೀರಅಹ್ಮದ ಗದಗ, ಮೋಹನ ನಂದೆಣ್ಣವರ, ಗಂಗಾಧರ ಮೆಣಸಿನಕಾಯಿ, ಮಂಜುನಾಥ ಹೊಗೆಸೊಪ್ಪಿನ, ಇಸ್ಮಾಯಿಲ ಆಡೂರ, ಇಕ್ಬಾಲ ಸೂರಣಗಿ, ದಾಧಾಪೀರ ತಂಬಾಕ, ಬಸವರಾಜ ಕಲ್ಲೂರ ರಮೇಶ ಲಮಾಣಿ, ಬಸವರಾಜ ಚಕ್ರಸಾಲಿ, ಬಸವರಾಜ ಹಳ್ಳಿಕೇರಿ, ಕಿರಣ ಚಿಲ್ಲೂರಮಠ, ಈರಣ್ಣ ಪೂಜಾರ ಸೇರಿದಂತೆ ಹಿಂದೂ-ಮುಸ್ಲಿಂ ಬಾಂಧವರು ಇದ್ದರು. ಪೊಲೀಸ್ ಸಿಬ್ಬಂದಿಗಳಾದ ಪ್ರಕಾಶ ಮ್ಯಾಗೇರಿ, ಮಾರುತಿ ಲಮಾಣಿ ನಿರೂಪಿಸಿದರು.


Spread the love

LEAVE A REPLY

Please enter your comment!
Please enter your name here