ವಿಜಯಸಾಕ್ಷಿ ಸುದ್ದಿ, ರೋಣ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ಜರುಗಿದ ಮತದಾನ ಪ್ರಕ್ರಿಯೆಯು ರೋಣ ತಾಲೂಕಿನಲ್ಲಿ ಶಾಂತಿಯುತವಾಗಿ ಜರುಗಿತು. ಶಾಸಕ ಜಿ.ಎಸ್. ಪಾಟೀಲ ತಮ್ಮ ಕುಟುಂಬ ಸಮೇತರಾಗಿ ಪಟ್ಟಣದ ಮತಗಟ್ಟೆ ಸಂಖ್ಯೆ 112ರಲ್ಲಿ, ಸರತಿ ಸಾಲಿನಲ್ಲಿ ನಿಂತು ತಮ್ಮ ಮತವನ್ನು ಚಲಾಯಿಸಿದರು.
ಮತದಾನ ಪ್ರಕ್ರಿಯೆ ಬೆಳಿಗ್ಗೆ ಹೊತ್ತಿನಲ್ಲಿ ಬಿರುಸಿನಿಂದ ಸಾಗಿದರೂ, ಮದ್ಯಾಹ್ನದ ಬಿಸಿಲಿನ ತಾಪದ ಕಾರಣದಿಂದ ತುಸು ಮಂದಗತಿಯಲ್ಲಿ ನಡೆಯಿತು. ಸಂಜೆ 4ರ ನಂತರ ಮತದಾನ ಪ್ರಕ್ರಿಯೆ ಪುನಃ ವೇಗ ಪಡೆದುಕೊಂಡಿತ್ತು.
ಬಿಸಿಲಿನ ತಾಪವನ್ನೂ ಲೆಕ್ಕಿಸದೆ ವಯೋವೃದ್ಧರು ಮತಗಟ್ಟೆಗಳಿಗೆ ತೆರಳಿ ತಮ್ಮ ಹಕ್ಕನ್ನು ಚಲಾಯಿಸಿದರು. ಒಟ್ಟಿನಲ್ಲಿ ತಾಲೂಕಿನಾದ್ಯಾಂತ ಯಾವುದೇ ರಿತಿಯ ಅಹಿತಕರ ಘಟನೆಗಳು ಸಂಭವಿಸದೆ ಮತದಾನ ಯಶಸ್ವಿಯಾಗಿ ನಡೆದಿದೆ ಎಂದು ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.



