ಗದಗ: ನವಿಲುಗಳು ಸೌಂದರ್ಯಕ್ಕೆ ಮಾತ್ರವಲ್ಲದೆ ನಾಟ್ಯಕ್ಕೂ ಹೆಸರಾದ ಪಕ್ಷಿ. ಇಂತಹ ನವಿಲುಗಳ ನಾಟ್ಯವನ್ನು ನೋಡಲು ಎರಡು ಕಣ್ಣು ಸಾಲದು. ಆದರೆ ನವಿಲುಗಳ ನಾಟ್ಯ ಪ್ರದರ್ಶನ ಕಾಣಸಿಗುವುದು ಬಹಳ ಅಪರೂಪ. ಹಾಗಿರುವಾಗ ಇದೀಗ ಇಲ್ಲೊಂದು ಮಯೂರನ ನಾಟ್ಯದ ಸುಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನವಿಲಿನ ಅದ್ಭುತ ನಾಟ್ಯವನ್ನು ಕಂಡು ನೋಡುಗರ ಮನ ಸೋತಿದ್ದಾರೆ.
ಹೌದು ಗದಗ ಜಿಲ್ಲೆ ಮುಂಡರಗಿ ತಾ.ಹಾರೋಗೇರಿ ಗ್ರಾಮದಲ್ಲಿ ನವಿಲಿನ ನಾಟ್ಯಕ್ಕೆ ಮನಸೋತಿದ್ದಾರೆ. ಸ್ವಚ್ಛಂದವಾಗಿ ತನ್ನ ಗರಿಗಳನ್ನ ಬಿಚ್ಚಿ ನಾಟ್ಯ ಶೈಲಿಯಲ್ಲಿ ಕಂಗೊಳಿಸಿದ ನವಿಲನ್ನು ನೋಡಲು ಎರಡು ಕಣ್ಣು ಸಾಲದು.
ಗ್ರಾಮಕ್ಕೆ ಪ್ರತಿನಿತ್ಯ ಆಗಮಿಸಿ ಪಾರಿವಾಳ, ಕೋಳಿಗಳ ಗುಂಪಿನೊಂದಿಗೆ ಸೇರಿ ಕೆಲಹೊತ್ತು ಸಮಯ ಕಳೆಯುತ್ತದೆ ಈ ನವಿಲು, ನವಿಲಿನ ನಾಟ್ಯದಾಟವನ್ನ ಪ್ರತಿದಿನ ಗ್ರಾಮಸ್ಥರು ಕಣ್ತುಂಬಿಕೊಳ್ಳುತ್ತಾರೆ. ನವಿಲಿನ ನಾಟ್ಯವನ್ನ ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ತನ್ನ ಸುಂದರ ಗರಿಗಳನ್ನು ಬಿಚ್ಚಿ ನೃತ್ಯ ಮಾಡುತ್ತಿರುವಂತಹ ನವಿಲಿನ ವಿಡಿಯೋ ವೈರಲ್ ಆಗುತ್ತಿದೆ.