“ಪೆದ್ದಿ” ಸಿನಿಮಾ ಶೂಟಿಂಗ್: ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ ರಾಮ್ ಚರಣ್!

0
Spread the love

ಮೈಸೂರು: ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತೆಲುಗು ಚಿತ್ರರಂಗದ ಸ್ಟಾರ್ನಟ ರಾಮ್ಚರಣ್ಭೇಟಿಯಾಗಿದ್ದಾರೆ. ಮೈಸೂರಿನಲ್ಲಿ ಪೆದ್ದಿ ಸಿನಿಮಾದ ಶೂಟಿಂಗ್ನಡೆಯುತ್ತಿದ್ದು, ವೇಳೆ ಮೈಸೂರು ನಿವಾಸದಲ್ಲಿ ಸಿಎಂ ಭೇಟಿಯಾದರು.

Advertisement

ಸಿದ್ದರಾಮಯ್ಯಗೆ ಶಾಲು ಹೊದಿಸಿ, ಹೂವಿನ ಹಾರ ಹಾಕಿ ನಟ ಗೌರವಿಸಿದರು. ವೇಳೆ ಸಚಿವ ಸಂತೋಷ್ಲಾಡ್‌, ಸಿಎಂ ಪುತ್ರ ಹಾಗೂ ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ ಕೂಡ ಇದ್ದರುರಾಮ್ ಚರಣ್ ನಾಯಕನಾಗಿ ಅಭಿನಯಿಸುತ್ತಿರುವ ಪೆದ್ದಿ ಚಿತ್ರೀಕರಣ ಮೈಸೂರಿನಲ್ಲಿ ಭರದಿಂದ ಸಾಗುತ್ತಿದೆ. ಅದ್ಧೂರಿ ಸೆಟ್ ಹಾಕಿ ಮಾಸ್ ಸಾಂಗ್ವೊಂದನ್ನು ಈಚೆಗೆ ಶೂಟಿಂಗ್ ನಡೆಸಲಾಗಿದೆ.

1,000 ಡ್ಯಾನ್ಸರ್ಸ್ ಜೊತೆ ಗ್ಲೋಬಲ್ ಸ್ಟಾರ್ ರಾಮ್ ಚರಣ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಖ್ಯಾತ ಡ್ಯಾನ್ಸ್ ಮಾಸ್ಟರ್ ಜಾನಿ ಹಾಡಿಗೆ ಕೊರಿಯೋಗ್ರಾಫ್ಮಾಡಿದ್ದಾರೆ. ಬಹಳ ಅದ್ಧೂರಿಯಾಗಿ ದೊಡ್ಡ ಬಜೆಟ್ನಲ್ಲಿ ಸಾಂಗ್ ಚಿತ್ರೀಕರಣ ನಡೆಸಲಾಗಿದೆ.


Spread the love

LEAVE A REPLY

Please enter your comment!
Please enter your name here