ಜನರೇ ಎಚ್ಚರ; ಚಿಂದಿ ಆಯುವ ನೆಪದಲ್ಲಿ ಬಂದು ಕಳ್ಳತನ ಮಾಡ್ತಾರೆ ಹುಷಾರ್!

0
Spread the love

ದಾವಣಗೆರೆ:- ನಗರದ ಸಂತೆಬೆನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಚಿಂದಿ ಆಯುವ ನೆಪದಲ್ಲಿ ಬಂದು ಕಳ್ಳತನಕ್ಕೆ ಯತ್ನಿಸಿದ ಮೂವರು ಮಹಿಳೆಯರನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

Advertisement

ಕಾವ್ಯ, ರಂಜಿತಾ ಮತ್ತು ಗಿರಿಯಮ್ಮ ಬಂಧಿತ ಕಳ್ಳಿಯರು. ಈ ಮೂವರು ಸೇರಿ ವೆಂಕಟೇಶ್ವರ ಕ್ಯಾಂಪ್‍ನ ವಿಶ್ವನಾಥ್ ಎಂಬವರ ಮನೆ ಬೀಗ ಒಡೆದಿದ್ದರು. ಬಳಿಕ ಪದ್ಮಾವತಿ ಎಂಬವರ ಮನೆಯ ಬೀಗ ಒಡೆಯುವಾಗ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾರೆ. ಕೂಡಲೇ ಗ್ರಾಮಸ್ಥರು ಮಹಿಳೆಯರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಸ್ಥಳಕ್ಕೆ ಸಂತೆಬೆನ್ನೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಂಧಿತರನ್ನು ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದೆ.


Spread the love

LEAVE A REPLY

Please enter your comment!
Please enter your name here