ಮಧ್ಯಪ್ರದೇಶ: ಮಧ್ಯಪ್ರದೇಶದ ಬೇತುಲ್ ಜಿಲ್ಲೆಯ ಚಿಚೋಲಿ ಬ್ಲಾಕ್‌ನ ಬೋಡ್ ರಯಾತ್ ಗ್ರಾಮದಲ್ಲಿ ಗ್ರಾಮಕ್ಕೆ ಸೇತುವೆ ವ್ಯವಸ್ಥೆ ಇಲ್ಲದೆ ಗರ್ಭಿಣಿಯನ್ನ ಎತ್ತಿನ ಗಾಡಿಯಲ್ಲಿ ಕೂರಿಸಿ ನದಿ ದಾಟಿಸಿದ ಘಟನೆ ಜರುಗಿದೆ.
Advertisement
ಸುನೀತಾ ಉಯಿಕೆ ಎಂಬ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಗ್ರಾಮದ ಬಳಿ ಇರೋ ಭಾಜಿ ನದಿ ಉಕ್ಕಿ ಹರಿಯುತ್ತಿದ್ದು, ಸೇತುವೆ ಇಲ್ಲದ ಕಾರಣ ಗ್ರಾಮಸ್ಥರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು, ಎತ್ತಿನ ಬಂಡಿಯಲ್ಲಿ ನದಿ ದಾಟಲು ಸಹಾಯ ಮಾಡಿದ್ದಾರೆ.
ಸುನೀತಾ ಅವರನ್ನ ಚಿರಪಟ್ಲಾ ಆಸ್ಪತ್ರೆಗೆ ದಾಖಲಿಸಲಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ತಾಯಿ ಮಗು ಇಬ್ಬರೂ ಸೇಪ್ ಆಗಿದ್ದು, ನಮ್ಮ ಗ್ರಾಮಕ್ಕೆ ಸೇತುವೆ ಕಲ್ಪಿಸಿ ಕೊಡಿ ಅಂತ ಗ್ರಾಮಸ್ಥರು ಬೇಡಿಕೊಳ್ತಿದ್ದಾರೆ. ಕಳೆದ 7 ದಶಕಗಳಿಂದ ಜನರು ಸೇತುವೆ ನಿರ್ಮಾಣಕ್ಕಾಗಿ ಆಗ್ರಹಿಸುತ್ತಿದ್ದಾರೆ.