ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಈ ವರ್ಷದ ಮೊದಲ ಧಾರಾಕಾರ ಮಳೆ ಭಾರಿ ಅಬ್ಬರಿಸಿದ್ದು, ಜನತೆ ಕಂಗಾಲಾಗಿದ್ದಾರೆ.
ಚಿಕ್ಕಮಗಳೂರು, ಕೊಪ್ಪ, ಮೂಡಿಗೆರೆ, ಕಳಸ, ಶೃಂಗೇರಿ ಹಾಗೂ NR ಪುರ ಪ್ರದೇಶಗಳಲ್ಲಿ ತೀವ್ರ ಮಳೆ ಪರಿಣಾಮ ಜನತೆ ಸಂಕಷ್ಟಕ್ಕೊಳಗಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ಕೊರೆಯುವ ಚಳಿ, ಶೀತ ಗಾಳಿ ಜನರನ್ನು ಕೋಪಗೊಳಿಸಿದ್ದರೆ, ಇಂದು ಧಾರಾಕಾರವಾಗಿ ಸುರಿದ ಮಳೆಯು ಹೆಚ್ಚುವರಿ ತೊಂದರೆ ಉಂಟುಮಾಡಿದೆ. ವಿಶೇಷವಾಗಿ, ಜಿಲ್ಲೆಯಾದ್ಯಂತ ನಡೆಯುತ್ತಿದ್ದ ಕಾಫಿ ಬೆಳೆ ಕೊಯ್ಲು ಹಠಾತ್ ಮಳೆಯಿಂದ ಹಾಳಾಗಿ ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ. ಕೆಲವೆಡೆ ಕಾಫಿ ಬೆಳೆ ಮಳೆ ನೀರಿನಲ್ಲಿ ಕೊಚ್ಚಿ ಹೋದ ದೃಶ್ಯವೂ ಕಂಡು ಬಂದಿದೆ.



