ಮೈಸೂರು: ನಮಗೆ ತೆರಿಗೆ ಪಾಲಿನಲ್ಲಿ ಅನ್ಯಾಯ ಆಗಿದೆ ಅಂತ ಜನ ದನಿ ಎತ್ತಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶಕ್ಕೆ ಬಂದಿರುವ ಪಾಲು ನೋಡಿ. ನಮಗೆ ಬಂದಿರುವ ಪಾಲನ್ನೂ ನೋಡಿ. ಅವರಿಗೂ ನಮಗೂ ಎಷ್ಟು ವತ್ಯಾಸ ಇದೆ. ನಮಗೆ ತೆರಿಗೆ ಪಾಲಿನಲ್ಲಿ ಅನ್ಯಾಯ ಆಗಿದೆ ಅಂತ ಜನ ದನಿ ಎತ್ತಬೇಕು.
Advertisement
ಬಿಜೆಪಿಯವರು ಕೇಂದ್ರ ಸರ್ಕಾರವನ್ನ ಸಮರ್ಥನೆ ಮಾಡ್ಕೊಂಡು ಮಾತಾಡೋದು ಕರ್ನಾಟಕದ ಜನರಿಗೆ ಮಾಡುವ ದ್ರೋಹವಾಗಿದೆ. ಇಷ್ಟೊಂದು ಜನ ಎಂಪಿ ಗೆಲ್ಲಿಸಿದ್ರೆ ರಾಜ್ಯದ ಪರ ದನಿ ಎತ್ತಬೇಕಲ್ವ?. ಇವತ್ತಿನವರಿಗೆ ದನಿ ಎತ್ತಿಲ್ಲ. ಕರ್ನಾಕಟಕ್ಕೆ 5 ವರ್ಷದಲ್ಲಿ 60 ಸಾವಿರ ಕೋಟಿ ನಷ್ಟ ಆಗಿದೆ ಎಂದು ತಿಳಿಸಿದ್ದಾರೆ.