ಬೆಂಗಳೂರು: ದೀಪಾವಳಿ ಹಬ್ಬದ ಕಾರಣಕ್ಕೆ ಬೆಂಗಳೂರಿನ ಕೆಂಪೇಗೌಡ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಜನರ ಸಂಚಾರ ಕಡಿಮೆಯಾಗಿದೆ. ಊರಿಗೆ ಹೋದ ಜನರಿಂದ ನಿಲ್ದಾಣ ಖಾಲಿಯಾಗಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.
Advertisement
ಶುಕ್ರವಾರದಿಂದ ಭಾನುವಾರವರೆಗೆ ಸಾವಿರಾರು ಮಂದಿ ತಮ್ಮ ಊರಿಗೆ ಹೋಗಿದ್ದರು. ಕಳೆದ ನಾಲ್ಕು ದಿನಗಳಲ್ಲಿ ಬೆಂಗಳೂರಿನಿಂದ ಹೊರಡುವ ಎಲ್ಲ ಬಸ್ಸುಗಳು ತುಂಬಿ ಸಂಚರಿಸಿದ್ದವು. ಆದರೆ ಇಂದು ಬಸ್‌ನಲ್ಲಿ ಪ್ರಯಾಣಿಸುವವರ ಸಂಖ್ಯೆ ತುಂಬಾ ಕಡಿಮೆ ಇದೆ.
ಹಾಸನಾಂಬ ದೇವಿ ದರ್ಶನಕ್ಕೆ ಹೋಗುವವರ ಸಂಖ್ಯೆಯೂ ಇಳಿಕೆಯಾಗಿದೆ. ಈ ಬಾರಿ ಬುಧವಾರ ದೀಪಾವಳಿ ಬಂದಿರುವುದರಿಂದ ಶನಿವಾರವೇ ಹಲವರು ಊರಿಗೆ ತೆರಳಿದ್ದರು.
ಈ ಶನಿವಾರ ಸಂಜೆ ಮತ್ತು ಭಾನುವಾರ ಊರಿನಿಂದ ಹಿಂದಿರುಗುವ ಪ್ರಯಾಣಿಕರು ಬೆಂಗಳೂರಿಗೆ ಬರುತ್ತಿರುವುದರಿಂದ ಗೊರಗುಂಟೆಪಾಳ್ಯ, ಎಲೆಕ್ಟ್ರಾನಿಕ್ ಸಿಟಿ ಮುಂತಾದ ಮಾರ್ಗಗಳಲ್ಲಿ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆ ಇದೆ.