ವಿಜಯಪುರ: ಸ್ವಾಮೀಜಿ ಮಾತನಾಡಿರುವುದರ ಬಗ್ಗೆ ಜನ ತೀರ್ಮಾನ ಮಾಡುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಲಿಂಗಾಯತ ವಿರೋಧಿ ಎಂದು ಸ್ವಾಮೀಜಿ ಆರೋಪ ವಿಚಾರವಾಗಿ ಮಾತನಾಡಿ, ಸ್ವಾಮೀಜಿ ಬಗ್ಗೆ ಮಾತನಾಡಲ್ಲ, ಸ್ವಾಮೀಜಿ ಮಾತನಾಡಿರುವುದರ ಬಗ್ಗೆ ಜನ ತೀರ್ಮಾನ ಮಾಡುತ್ತಾರೆ ಎಂದರು.
Advertisement
ಇನ್ನೂ ರಾಜ್ಯಾದ್ಯಂತ ಪ್ರತಿಭಟನೆಗೆ ಲಿಂಗಾಯ ಪಂಚಮಸಾಲಿ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಕರೆ ವಿಚಾರವಾಗಿ, ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡುವುದಕ್ಕೆ ಎಲ್ಲರಿಗೂ ಹಕ್ಕಿದೆ. ಬಿಜೆಪಿಯವರು ಪಂಚಮಸಾಲಿಗರಿಗೆ ಟೋಪಿ ಹಾಕಿ ಹೋಗಿದೆ. ಇವರು 2ಎ ಕೇಳಿದ್ದರೆ, ಅವರು 2ಡಿ ಮಾಡಿದ್ದಾರೆ ಎಂದರು.