HomeLife StyleHealth Tips: ಯಾವುದೇ ಕಾರಣಕ್ಕೂ ಈ ಸಮಸ್ಯೆ ಇರುವವರು ಕಡಲೆಕಾಯಿ ತಿನ್ನಬಾರದು..!

Health Tips: ಯಾವುದೇ ಕಾರಣಕ್ಕೂ ಈ ಸಮಸ್ಯೆ ಇರುವವರು ಕಡಲೆಕಾಯಿ ತಿನ್ನಬಾರದು..!

For Dai;y Updates Join Our whatsapp Group

Spread the love

ಕಡಲೆಕಾಯಿ ಅಥವಾ ಕಡಲೆ ಬೀಜವನ್ನು ‘ಬಡವರ ಬಾದಾಮಿ’ ಎಂದೇ ಕರೆಯಲಾಗುತ್ತದೆ. ನಮ್ಮ ಭಾರತೀಯ ಅಡುಗೆ ಮನೆಗಳಲ್ಲಿ ಕಡಲೆಕಾಯಿಯನ್ನು ಬಳಸಿ ಅನೇಕ ಸಿಹಿ ಮತ್ತು ವಿವಿಧ ಖಾದ್ಯಗಳಿಗೆ ಬಳಸಲಾಗುತ್ತದೆ. ಕಡಲೆಕಾಯಿಯಲ್ಲಿ ಒಮೆಗಾ -6 ಕೊಬ್ಬು ಸಮೃದ್ಧವಾಗಿದೆ, ಇದು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಇದು ಉತ್ತಮ ಕೋಶಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ.

ಆದ್ರೆ ಕೆಲವು ಆರೋಗ್ಯ ಸಮಸ್ಯೆಗಳು ಇರುವವರು ಕಡಲೆಕಾಯಿಯನ್ನು ತಿನ್ನಲೇಬಾರದು. ಈ ಬಗ್ಗೆ ವಿವರಣೆ ಇಲ್ಲಿ ನೀಡಲಾಗಿದೆ. ತಿಳಿದುಕೊಳ್ಳಿ.

ಥೈರಾಯ್ಡ್ ಸಮಸ್ಯೆ

ಥೈರಾಯ್ಡ್ ಸಮಸ್ಯೆ ಹೊಂದಿರುವವರು ಕಡಲೆಕಾಯಿ ಸೇವನೆ ಅಷ್ಟಾಗಿ ಒಳ್ಳೆಯದಲ್ಲ. ಅದು ನಿಮ್ಮ ಟಿಎಸ್​ಹೆಚ್ ಮಟ್ಟವನ್ನು ಹೆಚ್ಚಿಸಬಹುದು. ಹಾಗಾಗಿ ಕಡಲೆಕಾಯಿಯನ್ನು ಸೇವಿಸಬಾರದು. ಅದಾಗ್ಯೂ ಕಡಲೆಕಾಯಿ ತಿನ್ನಲು ಬಯಸಿದರೆ ನೀವು ಬಹಳ ಸೀಮಿತ ಪ್ರಮಾಣದಲ್ಲಿ ಕಡಲೆಕಾಯಿ ತಿನ್ನಬೇಕು. ಅಲ್ಲದೆ, ಥೈರಾಯ್ಡ್ ಸಮಸ್ಯೆಗೆ ಔಷಧ ತೆಗೆದುಕೊಳ್ಳುತ್ತಿದ್ದೀರಾದರೆ ಕಡಲೆಕಾಯಿ ತಿನ್ನದೇ ಇರುವುದು ಉತ್ತಮ.

ಅಲರ್ಜಿ ಸಮಸ್ಯೆ

ನಿಮಗೆ ಅಲರ್ಜಿ, ತುರಿಕೆ ಸಮಸ್ಯೆ ಇದ್ದರೆ ಕಡಲೆಕಾಯಿ ತಿನ್ನುವುದು ಸೂಕ್ತವಲ್ಲ. ಏಕೆಂದರೆ ಇದರಿಂದ ತುರಿಕೆ, ಅಲರ್ಜಿ ಸಮಸ್ಯೆಗಳು ಹೆಚ್ಚಾಗಬಹುದು. ಬೇಸಿಗೆಯಲ್ಲಿ ಕಡಲೆಕಾಯಿಯನ್ನು ಸೀಮಿತ ಪ್ರಮಾಣದಲ್ಲಿ ಸ್ವೀಕರಿಸಬೇಕು.

ಯಕೃತ್ತಿನ ಸಮಸ್ಯೆ

ಯಕೃತ್ತಿನ ಸಮಸ್ಯೆ ಇರುವವರು ಕಡಲೆಕಾಯಿಯನ್ನು ಸೇವಿಸಬಹುದು. ಆದರೆ, ಹೆಚ್ಚು ತಿನ್ನಬಾರದು. ಕಡಲೆಕಾಯಿಯಲ್ಲಿ ಇರುವ ಕೆಲವು ಅಂಶಗಳು ಯಕೃತ್ತಿನ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ. ವಿಶೇಷವಾಗಿ ಯಕೃತ್ತಿನ ಸಮಸ್ಯೆ ಇರುವವರು ಕಡಲೆಯಿಂದ ಸಾಧ್ಯ ಆದಷ್ಟು ದೂರ ಇರುವುದು ಉತ್ತಮ.

ಸಂಧಿವಾತ

ಸಂಧಿವಾತದಿಂದ ಬಳಲುತ್ತಿರುವವರು ಕಡಲೆಕಾಯಿ ತಿನ್ನುವುದನ್ನು ತಪ್ಪಿಸಬೇಕು. ಕಡಲೆಯ ಸೇವನೆಯು ಸಂಧಿವಾತ ಅಥವಾ ಗಂಟುನೋವನ್ನು ಉಲ್ಬಣಗೊಳಿಸಬಹುದು.

ಅಧಿಕ ತೂಕ

ನೀವು ಅಧಿಕ ತೂಕ ಹೊಂದಿದ್ದರೆ ಕಡಲೆಕಾಯಿಯನ್ನು ಸೀಮಿತ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಕಡಲೆಯಲ್ಲಿ ಹೆಚ್ಚಿನ ಕ್ಯಾಲೋರಿಗಳು ಇರುವುದೇ ಇದಕ್ಕೆ ಕಾರಣ. ಕಡಲೆಕಾಯಿಯಲ್ಲಿ ವಿವಿಧ ವಿಟಮಿನ್​ಗಳು, ಮಿನರಲ್​ಗಳು ಇದ್ದು ಅದು ಅಧಿಕ ತೂಕಕ್ಕೆ ಕಾರಣವಾಗುತ್ತದೆ.

 


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!