ಬೆಂಗಳೂರು:- ರಾಜಕೀಯ ಹಿನ್ನಲೆ ಇಲ್ಲದೆ ಇರೋರು ರಾಜಕೀಯಕ್ಕೆ ಬರಬೇಕು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಪ್ರೆಸ್ ಕ್ಲಬ್ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಕಾಲೇಜುಗಳಲ್ಲಿ ಮತ್ತೆ ಸ್ಟೂಡೆಂಟ್ ಎಲೆಕ್ಷನ್ ಮಾಡಲು ಮುಂದಾಗಿರೋ ಸರ್ಕಾರದ ನಡೆಯನ್ನ ಸ್ವಾಗತ ಮಾಡಿದ್ದಾರೆ. ಯುವಕರಿಗೆ ಇತ್ತೀಚೆಗೆ ಅವಕಾಶಗಳು ಸಿಕ್ತಿಲ್ಲ. ಹಿಂದೆ ಕಾಲೇಜು ಚುನಾವಣೆ ಇತ್ತು. ಅನೇಕ ಯುವಕರಿಗೆ ಅವಕಾಶ ಸಿಕ್ತಾ ಇತ್ತು. ಸಮಾಜದ ಬಗ್ಗೆ ಕಾಳಜಿ ಇಟ್ಟಿಕೊಂಡಿರೋ ಯುವ ಸಮೂಹ ಬರಬೇಕು. ಕಾಲೇಜ್ ಎಲೆಕ್ಷನ್ ಮರು ಕಳಿಸಬೇಕು ಎಂದು ತಿಳಿಸಿದರು.
ರಾಜಕೀಯ ಹಿನ್ನಲೆ ಇಲ್ಲದೆ ಇರೋರು ರಾಜಕೀಯಕ್ಕೆ ಬರಬೇಕು. ಕಾಲೇಜು ಎಲೆಕ್ಷನ್ ಒಳ್ಳೆ ವೇದಿಕೆ ಎಂದು ಕಾಲೇಜುಗಳಲ್ಲಿ ಚುನಾವಣೆ ಮಾಡೋ ಸರ್ಕಾರದ ನಿಲುವು ಸ್ವಾಗತ ಮಾಡಿದರು.



