ಕಾರ್ಖಾನೆಗಳಿಂದ ಬಾಧಿತವಾದ ಪ್ರದೇಶಗಳಲ್ಲಿ ಜನ ಜಾಗೃತಿ ಜಾಥಾಕ್ಕೆ ಚಾಲನೆ

0
Spread the love

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಆರಂಭಿಸಿರುವ `ಕಾರ್ಖಾನೆ ತೊಲಗಿಸಿ-ಕೊಪ್ಪಳ ಉಳಿಸಿ’ ಜನಾಂದೋಲನದ ಭಾಗವಾಗಿ ಜನಜಾಗೃತಿ ಕಾರ್ಯಕ್ರಮಕ್ಕೆ ತಾಲೂಕಿನ ಗಿಣಿಗೇರಿ ಗ್ರಾಮದಲ್ಲಿ ಚಾಲನೆ ನೀಡಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ನಮ್ಮಲ್ಲಿ ಈಗಿರುವ ಕಾರ್ಖಾನೆಗಳಿಂದ ಧೂಳು, ವಿಷ ಮತ್ತು ಪರಿಸರ ಮಾಲಿನ್ಯವನ್ನು ಎದುರಿಸಿದ್ದೇವೆ ಹೊರತು ನಮಗೆ ಯಾವುದೇ ಪ್ರಯೋಜನವಾಗಿಲ್ಲ. ಇದರ ಮೇಲೆ ಬೆಂಕಿಗೆ ತುಪ್ಪು ಸುರಿದ ಹಾಗೆ ಹೊಸ ಕಾರ್ಖಾನೆ ನಮ್ಮನ್ನು ಸಂಪೂರ್ಣವಾಗಿ ಸುಡಲು ಬರುತ್ತಿರುವದು ದುರಂತವೇ ಸರಿ. ಯಾವುದೇ ಕಾರಣಕ್ಕೂ ಅದನ್ನು ಆಗಲು ಬಿಡುವದಿಲ್ಲ. ಜನರು ಎಚ್ಚರಗೊಳ್ಳಬೇಕು ಎಂದು ಕರೆ ನೀಡಿದರು.

ಸಿಂಧನೂರಿನ ಪ್ರಗತಿಪರ ಹೋರಾಟಗಾರ ಎಚ್.ಎನ್. ಬಡಿಗೇರ್ ಮಾತನಾಡಿ, ಇಲ್ಲಿನ ಜನ-ಜಾನುವಾರುಗಳು, ಕೃಷಿ, ಜನಜೀವನವನ್ನೇ ಹಾಳು ಮಾಡಿರುವ ಇಲ್ಲಿನ ಕಾರ್ಖಾನೆಗಳು ಅವೈಜ್ಞಾನಿಕವಾಗಿ ಒಂದೇ ಕಡೆಗೆ ಬೀಡುಬಿಟ್ಟು ಇಲ್ಲಿನ ಪರಿಸರ ಹಾಳು ಮಾಡಿರುವದರಿಂದ ತೀವ್ರ ಸ್ವರೂಪದ ಹೋರಾಟ ಅಗತ್ಯವಿದೆ. ಅದಕ್ಕಾಗಿ ಈ ಆಂದೋಲನದ ಭಾಗವಾಗಿ ಬಂದಿದ್ದೇವೆ ಜನ ಸಹಕಾರ ಕೊಡಬೇಕು ಎಂದರು.

ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಸವರಾಜ ಶೀಲವಂತರ್, ಕರ್ನಾಟಕ ರೈತ ಸಂಘ (ಎಐಯುಕೆಎಸ್) ರಾಜ್ಯ ಅಧ್ಯಕ್ಷ ಡಿ.ಹೆಚ್. ಪೂಜಾರ್, ಗಿಣಿಗೇರಾ ನಾಗರಿಕ ಹೋರಾಟ ಸಮಿತಿ ಮುಖಂಡ ಮಂಗಳೇಶ್ ರಾಥೋಡ್ ಮಾತನಾಡಿದರು.

ವಿವಿಧ ಸಂಘಟನೆಗಳ ಮುಖಂಡರಾದ ಮೂಕಪ್ಪ ಮೇಸ್ತಿç, ತಿಮ್ಮಣ್ಣ ಕನಕಗಿರಿ, ಶರಣು ಗಡ್ಡಿ, ಎಸ್.ಎ. ಗಫಾರ್, ಬಿ.ಎನ್. ಯರದಿಹಾಳ, ಮುದುಕಪ್ಪ ಹೊಸಮನಿ, ಸುಂಕಪ್ಪ ಮೀಸಿ, ರಮೇಶ್ ಬೇಳೂರು, ರಮೇಶ್ ಪಾಟೀಲ್ ಬೇರಗಿ, ಕಾಶಪ್ಪ ಚಲವಾದಿ, ರಾಘು ಚಾಕರಿ, ಮಂಜುನಾಥ ದೊಡ್ಡಮನಿ ಮುಂತಾದವರು ಭಾಗವಹಿಸಿದ್ದರು.

ಯುವ ಮುಖಂಡ ಮಂಜುನಾಥ ಜಿ.ಗೊಂಡಬಾಳ ಮಾತನಾಡಿ, ಇಲ್ಲಿನ ಕಾರ್ಖಾನೆಗಳಿಂದ ಜನ ರೋಗಗಳನ್ನು ಪಡೆದಿದ್ದಾರೆ. ಆಹಾರವೇ ವಿಷವಾಗಿ ಆಯುಷ್ಯವೇ ಅರ್ಧಕ್ಕೆ ಬಂದಿರುವದು ದುರಾದೃಷ್ಟಕರ. ಇಲ್ಲಿ ಕಾರ್ಖಾನೆಗಳು ಬಂದರೂ ಇಲ್ಲಿಯ ಜನರಿಗೆ ಕೆಲಸ ಸಿಗುವದಿಲ್ಲ, ಕಮ್ಮಿ ಸಂಬಳಕ್ಕೆ ಕೆಲಸ ಮಾಡುವ ಉತ್ತರದ ಜನರನ್ನು ಕರೆತರುತ್ತಾರೆ. ಫೆ. 24ರಂದು ಕೊಪ್ಪಳ ಭಾಗ್ಯನಗರ ಬಂದ್‌ನಲ್ಲಿ ಎಲ್ಲರೂ ಭಾಗವಹಿಸಿಬೇಕು ಎಂದು ಕರೆ ನೀಡಿದರು.


Spread the love

LEAVE A REPLY

Please enter your comment!
Please enter your name here