CM ವಿರುದ್ಧ ಪ್ರಾಸಿಕ್ಯೂಷನ್’ಗೆ ಅನುಮತಿ: ಡಿಸಿಎಂ ಡಿ.ಕೆ ಶಿವಕುಮಾರ್ ಏನಂದ್ರು ಗೊತ್ತಾ..?

0
Spread the love

ಬೆಂಗಳೂರುಸಿಎಂ ಸಿದ್ದರಾಮಯ್ಯ ಮೇಲೆ ಪ್ರಾಸಿಕ್ಯೂಷನ್ ಗೆ ಅನುನತಿ ನೀಡಿದ ರಾಜ್ಯಪಾಲರ ನಡೆಯನ್ನು ಸಚಿವರು, ಕಾಂಗ್ರೆಸ್ ಮುಖಂಡರು ಖಂಡಿಸಿದ್ದಾರೆ. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈ ಗೊಂಬೆ ಎಂದು ಆರೋಪಿಸಿದ್ದಾರೆ. ಸಿಎಂ ಪರವಾಗಿತುರ್ತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್, ಇಂದು ಬೆಳಗ್ಗೆ ರಾಜ್ಯಪಾಲರು ಸಂವಿಧಾನದ ವಿರೋಧಿ, ಪ್ರಜಾಪ್ರಭುತ್ವಕ್ಕೆ ಮಾರಕವಾಗುವ ಪತ್ರವನ್ನು ಕಳುಹಿಸಿ ಕೊಟ್ಟಿದ್ದಾರೆ.

Advertisement

ಕಳೆದ ಜೂನ್ 27ರಂದೇ ರಾಜ್ಯಪಾಲರು ನೊಟೀಸ್ ಕೊಟ್ಟಿದ್ದರು. ಅದಕ್ಕೆ ಸಿಎಂ ಸಿದ್ದರಾಮಯ್ಯ ಅವಧಿಯಲ್ಲಿ‌ ಯಾವ ಲೋಪದೋಷಗಳು ಆಗಿಲ್ಲ ಎಂದು ಸವಿವರವಾದ ಉತ್ತರವನ್ನು ಕೊಡಲಾಗಿತ್ತು ಎಂದು ಹೇಳಿದ್ದಾರೆ. ರಾಜ್ಯಪಾಲರ ಹುದ್ದೆಗೆ ತನ್ನದೇ ಗೌರವವಿದೆ. ಗವರ್ನರ್ ನೇರವಾಗಿ ಪತ್ರ ಕಳಿಸಿಕೊಟ್ಟಿದ್ದಾರೆ.

ಪ್ರಾಸಿಕ್ಯೂಷನ್‌ಗೆ ಕೊಡಬೇಕಾದರೆ ಎನ್‌ಕ್ವೈರಿ ಆಗಬೇಕು. ಲೋಕಾಯುಕ್ತ ಬೇರೆ ತನಿಖೆ ಯಾಗಬೇಕು. ಒಂದೇ ದಿನ ಅರ್ಜಿ ಬರುತ್ತೆ ನೊಟೀಸ್ ಕೊಡ್ತಾರೆ. ಇದನ್ನ ನಾವು ಪ್ರಶ್ನಿಸಿ ಅವರಿಗೆ ಮನವಿ ಮಾಡಿದ್ದೆವು. ಅದನ್ನ ರಾಜ್ಯಪಾಲರು ತಿರಸ್ಕರಿಸಿದ್ದರು. ಸೆಕ್ರಟರಿ ಕಡೆಯಿಂದ ಇವತ್ತು ಆದೇಶ ಮಾಡಿದ್ದಾರೆ ಎಂದು ಡಿಕೆಶಿ ಪ್ರಶ್ನೆ ಮಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here