HomeSports Newsಕ್ರೀಡೆಗಳಿಂದ ವ್ಯಕ್ತಿತ್ವ ವಿಕಸನ : ಮುಖಂಡ ಸುರೇಶ ಶಿರೋಳ

ಕ್ರೀಡೆಗಳಿಂದ ವ್ಯಕ್ತಿತ್ವ ವಿಕಸನ : ಮುಖಂಡ ಸುರೇಶ ಶಿರೋಳ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಕ್ರೀಡೆಗಳು ವ್ಯಕ್ತಿಗಳನ್ನು ದೈಹಿಕವಾಗಿ, ಮಾನಸಿಕವಾಗಿ ಸದೃಢಗೊಳಿಸುತ್ತವೆ. ಇದರಿಂದ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಪ್ರತಿ ವ್ಯಕ್ತಿಯ ವ್ಯಕ್ತಿತ್ವವೂ ವಿಕಸನಗೊಳ್ಳುತ್ತದೆ ಎಂದು ಮುಖಂಡ ಸುರೇಶ ಶಿರೋಳ ಹೇಳಿದರು.

ಸಮೀಪದ ಅಬ್ಬಿಗೇರಿಯ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಶ್ರೀ ಅನ್ನದಾನೇಶ್ವರ ಪ್ರೌಢಶಾಲೆ ಮೈದಾನದಲ್ಲಿ ನಡೆಯುತ್ತಿರುವ ಅಬ್ಬಿಗೇರಿ ಪ್ರೀಮಿಯರ್ ಲೀಗ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಸಾಮಾಜಿಕ ಪ್ರಜ್ಞೆ, ಸಾಮಾಜಿಕ ಜವಾಬ್ದಾರಿ ಬೆಳೆಯುತ್ತದೆ. ಭಾರತದಲ್ಲಿ ಕ್ರೀಡೆಗಳಿಗೆ ಹೆಚ್ಚು ಪ್ರಾಮುಖ್ಯತೆ ದೊರೆಯುತ್ತಿದೆ. ಕ್ರೀಡೆಗಳಲ್ಲಿ ತೊಡಗಿಕೊಳ್ಳುವವರು ವ್ಯಸನ ಮುಕ್ತರಾಗಿರಬೇಕು. ಅಂದಾಗ ಮಾತ್ರ ಅವರಲ್ಲಿ ಆಟದ ಕಡೆಗೆ ಏಕಾಗ್ರತೆ ಬರಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ವಿಜಯಕುಮಾರ ಇಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಪಲ್ಲೇದ, ರವಿ ಮುಗಳಿ, ಅನಿಲ ನವಲಗುಂದ, ಇಸ್ಮಾಯಿಲ್ ಕೋಟೇಕಲ್, ರಾಜು ಅವರೆಡ್ಡಿ, ಶಾಂಕರ ದ್ವಾಸಲ, ವೀರಣ್ಣ ಪಟ್ಟಣಶೆಟ್ಟಿ, ರಮೇಶ ಮಡಿವಾಳರ, ಪ್ರವೀಣ ಮಳಗಿ, ವಿಲಾಸ ಹಿರೇಮಠ, ಅಶೋಕ ಬಸವರಡ್ಡೇರ, ಅಶೋಕ ತೋಟಗಂಟಿ, ಮಲ್ಲು ಗುಜಮಾಗಡಿ, ರವಿ ಸೊಲಗಿ, ಪ್ರಲ್ಹಾದ ಕಟಗೇರಿ, ಬವಸರಾಜ ಅಂಗಡಿ, ಮಹಾಂತೇಶ ನೀರಲೋಟಿ, ಬಸವರಾಜ ಮಲ್ಲಾಪೂರ, ಸುನೀಲ ಸೊಲಗಿ, ಮಲ್ಲು ಅವರೆಡ್ಡಿ, ಪ್ರಭು ಅವರೆಡ್ಡಿ, ಗಣೇಶ ಐಹೊಳಿ, ವಿಶ್ವನಾಥ ತಿಪಶೆಟ್ಟಿ, ತಾಯಪ್ಪ ದ್ವಾಸಲ ಮುಂತಾದವರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!