ಜೂಜಾಟ ನಿಷೇಧಿಸಲು ಒತ್ತಾಯಿಸಿ ಮನವಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲೆಯಾದ್ಯಂತ ದೀಪಾವಳಿ ಹಬ್ಬದ ನೆಪದಲ್ಲಿ ಎಲ್ಲ ಅಂಗಡಿ, ಮನೆ ಹಾಗೂ ಫುಟ್‌ಪಾತ್‌ನಲ್ಲಿ ಪೆಂಡಾಲ್ ಹಾಕಿ, ಸುತ್ತಲೂ ಪರದೆ ಕಟ್ಟಿ ರಾಜಾರೋಷವಾಗಿ ಇಸ್ಪೇಟ್, ಜೂಜಾಟ ಯಾರ ಭಯವಿಲ್ಲದೇ ನಡೆಯುತ್ತದೆ.

Advertisement

ಬರಗಾಲದ ಪರಿಸ್ಥಿತಿಯಿಂದ ಸಾವಿರಾರು ಕುಟುಂಬಗಳು ಸಂಕಷ್ಟದಲ್ಲಿರುವಾಗ ಈ ಇಸ್ಪೇಟ್ ಹಾಗೂ ಜೂಜಾಟದಿಂದ ಬಹಳಷ್ಟು ಕುಟುಂಬಗಳು ಹಣ ಕಳೆದು ಕೊಳ್ಳುವುದರೊಂದಿಗೆ ಸಾಲ ಮಾಡಿ ಸಮಸ್ಯೆಗಳ ಸುಳಿಗೆ ಸಿಲುಕಿ, ಮನೆಯಲ್ಲಿರುವ ಬೆಲೆಬಾಳುವ ವಸ್ತುಗಳನ್ನು, ಮಹಿಳೆಯರ ತಾಳಿಯನ್ನು ಕೂಡಾ ಅಡುವಿಟ್ಟು ಜೂಜಾಟವಾಡುತ್ತಿರುವುದರಿಂದ ತಾಯಂದಿರು ಹಾಗೂ ಮಹಿಳೆಯರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಎಲ್ಲರ ಬಾಳಿನಲ್ಲಿ ಬೆಳಕು ಚಾಲುವ ದೀಪಾವಳಿ ಹಬ್ಬದ ದಿನವೇ ಸಾವಿರಾರು ಕುಟುಂಬಗಳು ಕಂಗಾಲಾಗಿ ಬೀದಿಗೆ ಬೀಳುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆ ದೆಹಲಿಯ ಗದಗ ಜಿಲ್ಲಾ ಘಟಕದ ಕಾರ್ಯದರ್ಶಿ ಮಂಜುನಾಥ ದು. ಹದ್ದಣ್ಣವರ ಮನವಿ ಮಾಡಿದರು.

ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಮನವಿ ಸಲ್ಲಿಸಿ ಮಾತನಾಡಿ, ಈ ಬಗ್ಗೆ ಕಾನೂನಾತ್ಮಕ ಕ್ರಮ ಕೈಗೊಂಡು ಇಸ್ಪೇಟ್ ಜೂಜಾಟ ರಹಿತ ದೀಪಾವಳಿ ಹಬ್ಬ ಆಚರಿಸುವಲ್ಲಿ ಕ್ರಮ ಕೈಗೊಳ್ಳುವುದರ ಮೂಲಕ ಸಾವಿರಾರು ಕುಟುಂಬಗಳಿಗೆ ದೀಪಾವಳಿ ಹಬ್ಬದ ಬೆಳಕು ನೀಡುವ ಕಾರ್ಯವಾಗಬೇಕೆಂದು ಮನವಿ ಮಾಡಿದರು.

ಸಂಸ್ಥೆಯ ರಾಜ್ಯ ಹಿಂದುಳಿದ ವಿಭಾಗದ ಕಾರ್ಯದರ್ಶಿ ಶೈಲೇಂದ್ರ ಶೆಂಬೇಕರ, ಗದಗ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಪ್ರಕಾಶ ಬನ್ನಿಗಿಡದ, ಉಪಾಧ್ಯಕ್ಷ ಹನಮಂತ ಪಲದೊಡ್ಡಿ, ಕಾರ್ಯದರ್ಶಿ ಶೇಖಸಾಬ ಕಾತರಕಿ, ಮೀಡಿಯಾ ಕಾರ್ಯದರ್ಶಿ ಯಾಸೀನಸಾಬ್ ಬೊದ್ಲೇಖಾನ, ಡಾ. ಸಿ.ಎಸ್. ಹನಮಂತಗೌಡ್ರ, ಸಂಘಟನಾ ಕಾರ್ಯದರ್ಶಿ ಮಂಜುನಾಥ ಆಸಂಗಿ, ಶಂಕರಗೌಡ ಪಾಟೀಲ, ಕಿರಣ ಶೆಂಬೇಕರ, ಸುರಜ ಶೆಂಬೇಕರ, ಸೋಮಶೇರ‍್ಯ ಕಂಬಿಮಠ, ಈರಣ್ಣಾ ಮಲ್ಲಾಡದ ಸಾಮಾಜಿಕ ಕಾರ್ಯಕರ್ತರಾದ ಇಬ್ರಾಹಿಂಸಾಬ ದಾವಲಖಾನ, ಮನಸೂರ ಅಹ್ಮದ ಶಿರಹಟ್ಟಿ, ರಾಜೇಸಾಬ ಬೊದ್ಲೇಖಾನ, ಇಸ್ಮಾಯಿಲ್ ಬದಾಮಿ, ಮುಸ್ತಾಫ್ಅಹ್ಮದ ಧಾರವಾಡ, ಹಜರತ್‌ಸಾಬ್ ಬಾಗಲಿ, ಸಬ್ಬೀಅಹ್ಮದ್ ಬದಾಮಿ, ಉಸ್ಮಾನಗಣಿ ಬದಾಮಿ, ಬಸೀರಅಹ್ಮದ ಚಿನ್ನೂರ, ಇಮ್ತಿಯಾಜಅಹ್ಮದ ಟೇಲರ, ಇಫ್ತಿಖಾರ್ ಬೆಲೇರಿ ಇದ್ದರು.


Spread the love

LEAVE A REPLY

Please enter your comment!
Please enter your name here