ವಿಜಯಸಾಕ್ಷಿ ಸುದ್ದಿ, ಗದಗ : ಜಿಲ್ಲೆಯಾದ್ಯಂತ ದೀಪಾವಳಿಯ ಹಬ್ಬದ ನೆಪದಲ್ಲಿ ಎಲ್ಲ ಅಂಗಡಿ, ಮನೆ ಹಾಗೂ ಪುಟ್‌ಪಾತ್‌ನಲ್ಲಿ ಪೆಂಡಾಲ್ ಹಾಕಿ, ಸುತ್ತಲೂ ಪರದೆ ಕಟ್ಟಿ ರಾಜಾರೋಷವಾಗಿ ಇಸ್ಪೇಟ್ ಮತ್ತು ಜೂಜಾಟ ನಡೆಯುತ್ತದೆ. ಬರಗಾಲದ ಪರಿಸ್ಥಿತಿಯಿಂದ ಸಾವಿರಾರು ಕುಟುಂಬಗಳು ಸಂಕಷ್ಟದಲ್ಲಿರುವಾಗ ಈ ಜೂಜಾಟದಿಂದ ಬಹಳಷ್ಟು ಕುಟುಂಬಗಳು ಹಣ ಕಳೆದುಕೊಳ್ಳುವುದರೊಂದಿಗೆ ಸಮಸ್ಯೆಗಳ ಸುಳಿಗೆ ಸಿಲುಕುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕೆಂದು ರಾಜ್ಯ ಮಾಹಿತಿ ಹಕ್ಕು & ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಗದಗ ಜಿಲ್ಲಾ ಘಟಕದ ಜಿಲಾಧ್ಯಕ್ಷ ಮಂಜುನಾಥ ದು.ಹದ್ದಣ್ಣವರ ಪೊಲೀಸ್ ಇಲಾಖೆಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಶೇಖಸಾಬ ಕಾತರಕಿ, ಪ್ರಧಾನ ಕಾರ್ಯದರ್ಶಿ ಯಾಸೀನಸಾಬ್ ಬೊದ್ಲೇಖಾನ, ಖಜಾಂಚಿಗಳಾದ ಡಾ. ಸಿ.ಎಸ್. ಹನಮಂತಗೌಡರ, ಸಂಘಟನಾ ಕಾರ್ಯದರ್ಶಿ ಮೌಲಾಸಾಬ ಗಚ್ಚಿ, ಸಾಮಾಜಿಕ ಕಾರ್ಯಕರ್ತರಾದ ರಾಜೇಸಾಬ ಬೊದ್ಲೇಖಾನ, ಇಸ್ಮಾಯಿಲ ಬದಾಮಿ ಇದ್ದರು.