ಮದ್ಯದಂಗಡಿಗಳನ್ನು ಬಂದ್ ಮಾಡಿಸಲು ಮನವಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಶ್ರೀ ರಾಮ ಸೇನಾ ಗದಗ ಜಿಲ್ಲಾ ವತಿಯಿಂದ ಪ್ರತಿ ವರ್ಷ ಗದಗ ನಗರದಲ್ಲಿ ಶ್ರೀ ಛತ್ರಪತಿ ಶಿವಾಜಿ ಜಯಂತಿಯನ್ನು ಆಚರಿಸುತ್ತಾ ಬಂದಿದ್ದು, ಈ ವರ್ಷ ಫೆ.19ರಂದು ಶ್ರೀ ಛತ್ರಪತಿ ಶಿವಾಜಿ ಜಯಂತಿಯನ್ನು ಸರ್ವ ಹಿಂದೂ ಭಾಂದವರು ವಿಜೃಂಭಣೆಯಿಂದ ಆಚರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಫೆ.18 ಹಾಗೂ 19ರಂದು ಗದಗ ನಗರಕ್ಕೆ ವಿವಿಧ ಜಿಲ್ಲೆಯಿಂದ ಹಿಂದೂ ಭಾಂದವರು ಆಗಮಿಸಲಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಬಾರ್ ಹಾಗೂ ರೆಸ್ಟೋರೆಂಟ್‌ಗಳನ್ನು ಈ ಎರಡು ದಿನಗಳ ಕಾಲ ಬಂದ್ ಮಾಡಿಸಬೇಕೆಂದು ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

Advertisement

ಈ ಸಂಧರ್ಭದಲ್ಲಿ ಶ್ರೀರಾಮ ಸೇನಾ ಗೌವಾಧ್ಯಕ್ಷ ಶಿವಯೋಗಿ ಹಿರೇಮಠ, ಜಿಲ್ಲಾಧ್ಯಕ್ಷ ಸೋಮು ಗುಡಿ, ಶಹರ ಅಧ್ಯಕ್ಷ ಚೇತನ ಅಬ್ಬಿಗೇರಿ, ಕುಮಾರ ಮಿಟ್ಟಿಮಠ, ಸಂಜು ಚಟ್ಟಿ, ಮಹಾಬಳೇಶ್ವರ ಶೆಟ್ಟರ, ಶಿವಯೋಗಿ ಹಿರೇಮಠ, ಅನಿಲ್ ಮುಳ್ಳಾಳ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here